ಒಡಿಶಾ ಅಕ್ರಮ 60 ಸಾವಿರ ಕೋಟಿ
ದೇಶದ ಅತಿ ದೊಡ್ಡ ಗಣಿ ಅಕ್ರಮ ಕರ್ನಾಟಕದ್ದೋ, ಒಡಿಶಾದ್ದೋ ನ್ಯಾ. ಎಂ.ಬಿ.ಶಾ ನೇತೃತ್ವದ ಆಯೋಗದ ಪ್ರಕಾರ ಒಡಿಶಾ...
ನವದೆಹಲಿ: ದೇಶದ ಅತಿ ದೊಡ್ಡ ಗಣಿ ಅಕ್ರಮ ಕರ್ನಾಟಕದ್ದೋ, ಒಡಿಶಾದ್ದೋ ನ್ಯಾ. ಎಂ.ಬಿ.ಶಾ ನೇತೃತ್ವದ ಆಯೋಗದ ಪ್ರಕಾರ ಒಡಿಶಾದ ಜೋಡಾ ವಲಯದಲ್ಲಿ ನಡೆದ ಗಣಿ ಅಕ್ರಮವೇ ದೇಶದಲ್ಲಿ ಬೃಹತ್ ಗಣಿ ಹಗರಣ. ಒಡಿಶಾದಲ್ಲಿ ನಡೆದ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರು ಹಗರಣದ ಬಗ್ಗೆ ತನಿಖೆ ನಡೆಸಿದ ಆಯೋಗ ಈ ಅಭಿಪ್ರಾಯಕ್ಕೆ ಬಂದಿದೆ. ಕಳೆದ ಅಕ್ಟೋಬರ್ನಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಸಲ್ಲಿಕೆಯಾಗಿರುವ ಈ ವರದಿ ಈಗ ಸುಪ್ರೀಂನ ಹಸಿರು ಪೀಠದ ಮುಂದೆ ಇದೆ.