ಗುಲ್ಬರ್ಗಕ್ಕೆ ನಾಳೆ ಸೋನಿಯಾ ಗಾಂಧಿ
ಗುಲ್ಬರ್ಗ: ಗುಲ್ಬರ್ಗ ನಗರದಲ್ಲಿ ತಲೆ ಎತ್ತಿರುವ ಇಎಸ್ಐಸಿ ಮೆಡಿಕಲ್ ಕಾಲೇಜು ಸಂಕೀರ್ಣ ಲೋಕಾರ್ಪಣೆಗೆಂದು ಬರುತ್ತಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದಾಗಿ ನಗರದಲ್ಲಿ ಉತ್ಸವದ ವಾತಾವರಣ ಮೂಡಿದೆ ಎಂದು ಜಿಲ್ಲಾ ಪಾಲಕ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲಂ 371 (ಜೆ) ಅನುಷ್ಠಾನಗೊಂಡ ನಂತರ ಇದೇ ಮೊದಲ ಬಾರಿಗೆ ಸೋನಿಯಾಗಾಂಧಿ ಗುಲ್ಬರ್ಗಕ್ಕೆ ಆಗಮಿಸುತ್ತಿರುವುರಿಂದ ಅವರಿಗೆ ಅಭಿನಂದಿಸುವುದು ಪಕ್ಷದ ಹಿರಿಯರ ಕರ್ತವ್ಯವಾಗಿದೆ. ಆ ಕೆಲಸ ಈ ಭೇಟಿ ಸಂದರ್ಭದಲ್ಲಿ ಮಾಡಲಾಗುತ್ತದೆ ಎಂದರು.