ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೆನರಾ ಬ್ಯಾಂಕ್‌ಗೆ 1827 ಕೋಟಿ ನಿವ್ವಳ ಲಾಭ

Mainashree
Updated On : 31 Jan 2014, 10:22 am

ಬೆಂಗಳೂರು: ಕೆನರಾ ಬ್ಯಾಂಕ್ ಡಿಸೆಂಬರ್ 31ಕ್ಕೆ ಅಂತ್ಯವಾಗುವ ನವಮಾಸಗಳಲ್ಲಿ 4914 ಕೋಟಿ ಕಾರ್ಯಾಚರಣೆ ಲಾಭಗಳಿಸಿದ್ದು, 1827 ಕೋಟಿ ನಿವ್ವಳ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಕಾರ್ಯಾಚರಣೆ ಲಾಭ ಶೇ.17.2ರಷ್ಟು ಹೆಚ್ಚಾಗಿದೆ. ಮುನ್ನೇರ್ಪಾಡು ಮೂರನೇ ತ್ರೈಮಾಸಿಕದಲ್ಲಿ 1182 ಕೋಟಿ ಆಗಿದ್ದು, ಎರಡನೇ ತ್ರೈಮಾಸಿಕದಲ್ಲಿ 799 ಕೋಟಿ ಹಾಗೂ ಮೊದಲೇ ತ್ರೈಮಾಸಿಕದಲ್ಲಿ 1106 ಕೋಟಿ ಆಗಿತ್ತು ಎಂದು ಕೆನರಾಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. ಈ ವರ್ಷದಲ್ಲಿ 829 ಹೊಸ ಶಾಖೆಗಳನ್ನು ಆರಂಭಿಸಲಾಗಿದ್ದು, 1017 ಹೊಸ ಎಟಿಎಂಗಳು ಪ್ರಾರಂಭವಾಗಿವೆ. ಬ್ಯಾಂಕ್ ಶೇ.65ರಷ್ಟು ಲಾಭಾಂಶ ಘೋಷಿಸಿದೆ. ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕಕ್ಕೆ ಬ್ಯಾಂಕ್‌ನ ಒಟ್ಟಾರೆ ಆದಾಯ 10,935 ಕೋಟಿ ತಲುಪಿದ್ದು, ಶೇ.16.4ರಷ್ಟು ಪ್ರಗತಿ ಕಂಡಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಉನ್ನತೀಕರಿಸಿದ ಉದರಿಗಳ ಮೊತ್ತ 2061 ಕೋಟಿಯಾಗಿದ್ದು, ನಿವ್ವಳ ಬಡ್ಡಿ ಆದಾಯ 6409 ಕೋಟಿ ತಲುಪಿದೆ. ಬಡ್ಡಿಯೇತರ ಆದಾಯ 2863 ಕೋಟಿಯಾಗಿದೆ. ಜಾಗತಿಕ ಠೇವಣಿಗಳು 4.09 ಲಕ್ಷ ಕೋಟಿ, ಮುಂಗಡಗಳು 2.88 ಲಕ್ಷ ಕೋಟಿಯಾಗಿದೆ. ಆದ್ಯತಾ ಕ್ಷೇತ್ರ ಶೇ.33, ಕೃಷಿ ಸಾಲ ಶೇ.29, ಎಂಎಸ್‌ಎಂಇ ಶೇ.46, ಎಂಎಸ್‌ಇ ಶೇ.50, ರೀಟೆಲ್ ಸಾಲ ಶೇ.55, ಗೃಹ ಸಾಲ ಶೇ.71, ವಾಹನಸಾಲ ಶೇ.58, ವೈಯಕ್ತಿಕ ಸಾಲ ಶೇ.50ರಷ್ಟು ಸಾಧನೆಯಾಗಿದೆ ಎಂದು ವಿವರ ನೀಡಿದರು. ಮಾರ್ಚ್ ಅಂತ್ಯಕ್ಕೆ ಶಾಖೆಗಳ ಸಂಖ್ಯೆ 5500 ಹಾಗೂ ಎಟಿಎಂಗಳ ಸಂಖ್ಯೆ 10000 ಸಾವಿರಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement