ಕೇಂದ್ರ ವಿರುದ್ಧ ಸಿಜೆ ಸಿಡಿಮಿಡಿ
'ಸುಪ್ರೀಂಕೋರ್ಟ್‌ಗೆ ನೇಮಕ ಮಾಡುವ ನ್ಯಾಯಮೂರ್ತಿಗಳ ಪಟ್ಟಿಯಿಂದ ಗೋಪಾಲ ಸುಬ್ರಮಣಿಯಂ...
ನವದೆಹಲಿ: 'ಸುಪ್ರೀಂಕೋರ್ಟ್‌ಗೆ ನೇಮಕ ಮಾಡುವ ನ್ಯಾಯಮೂರ್ತಿಗಳ ಪಟ್ಟಿಯಿಂದ ಗೋಪಾಲ ಸುಬ್ರಮಣಿಯಂ ಹೆಸರನ್ನು ತಿರಸ್ಕರಿಸಿದ ಕೇಂದ್ರ ಕ್ರಮ ಸರಿಯಲ್ಲ. ಇದೊಂದು ಏಕಪಕ್ಷೀಯ ಕ್ರಮ'
- ಹೀಗೆಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾ. ಆರ್.ಎಂ.ಲೋಧಾ. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಸಂಬಂಧ ಮುಖ್ಯ ನ್ಯಾಯಮೂರ್ತಿಗಳ ಸಮಿತಿ (ಕೊಲೀಜಿಯಂ) ಮಾಜಿ ಅಟಾರ್ನಿ ಜನರಲ್ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ಮೋದಿ ಸರ್ಕಾರ ಅದನ್ನು ತಿರಸ್ಕರಿಸಿತ್ತು. ಈ ಬೆಳವಣಿಗೆ ಈಗ ಮುಖ್ಯ ನ್ಯಾಯಮೂರ್ತಿಯವರ ಕೋಪಕ್ಕೆ ಕಾರಣವಾಗಿದೆ.
ಸಮಾಲೋಚನೆ ನಡೆಸಿಲ್ಲ: ಕೇಂದ್ರ ಸರ್ಕಾರ ಗೋಪಾಲ ಸುಬ್ರಮಣಿಯಂ ಹೆಸರನ್ನು ತಿರಸ್ಕರಿಸುವ ಮುನ್ನ ತಮ್ಮ ಜತೆ ಸಮಾಲೋಚನೆ ನಡೆಸಿಯೇ ಇಲ್ಲ ಎಂದು ನ್ಯಾ.ಲೋಧಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಒಪ್ಪಿಗೆ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.