ತೇಜ್ಪಾಲ್ಗೆ ಜಾಮೀನು
ನವದೆಹಲಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತ ತರುಣ್ ತೇಜ್ಪಾಲ್ಗೆ ಕೊನೆಗೂ ಜಾಮೀನು ಸಿಕ್ಕಿದೆ. ಆದರೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ನಾಶ ಮಾಡಕೂಡದು. ಒಂದು ವೇಳೆ ಅಂಥ ಕೃತ್ಯ ನಡೆಸಿದರೆ ಜಾಮೀನು ರದ್ದುಪಡಿಸುವುದಾಗಿ ಎಂದು ಸುಪ್ರೀಂಕೋರ್ಟ್ ತೇಜ್ಪಾಲ್ಗೆ ಎಚ್ಚರಿಕೆ ನೀಡಿದೆ. ನ್ಯಾ.ಎಚ್.ಎಲ್.ದತ್ತು ನೇತೃತ್ವದ ನ್ಯಾಯಪೀಠ ಮಂಗಳವಾರ ಈ ತೀರ್ಪು ನೀಡಿದೆ.