ಯುವತಿ ಮೈ, ಕೈ ಮುಟ್ಟಿದ್ದಕ್ಕೆ ರು. 10 ಸಾವಿರ ದಂಡ
ಕೂಡ್ಲಿಗಿ: ಮೊಬೈಲ್ ಕೊಡುವ ನೆಪದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಯುವತಿಯ ಮೈ ಕೈ ಮುಟ್ಟಿದ್ದಕ್ಕೆ 10 ಸಾವಿರ ಪರಿಹಾರ ನೀಡುವಂತೆ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
ಕೂಡ್ಲಿಗಿ ತಾಲೂಕು ನಾಗಲಾಪುರ ಗ್ರಾಮದಲ್ಲಿ 2010ರಲ್ಲಿ ಪಕ್ಕದ ಮನೆಯ ಯುವಕ ನಾಗರಾಜ್ ಮೊಬೈಲ್ ಕೊಡಲು ಬಂದಿದ್ದ. ಮನೆಯಲ್ಲಿ ಬೇರಾರೂ ಇಲ್ಲದ್ದನ್ನು ಗಮನಿಸಿದ ಆತ 19 ವರ್ಷದ ಯುವತಿಯ ಮೈ, ಕೈ ಮುಟ್ಟಿದ್ದಾನೆ. ಯುವತಿ ಕಿರುಚಿಕೊಂಡಾದ ಓಡಿ ಹೋಗಿದ್ದಾನೆ. ನ. 30ರಂದು ಕೂಡ್ಲಿಗಿ ಠಾಣೆಯಲ್ಲಿ ಯುವತಿ ದೂರು ನೀಡಿದ್ದಳು. ಈ ಪ್ರಕರಣದ ತೀರ್ಪು ಸೋಮವಾರ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಹೊರಬಿದ್ದಿದ್ದು, ಆರೋಪಿ ನಾಗರಾಜ ಯುವತಿಗೆ 10 ಸಾವಿರ ಪರಿಹಾರ ನೀಡಬೇಕು. ಐಪಿಸಿ ಸೆಕ್ಷನ್ 448ರಡಿ ದೂರು ದಾಖಲಾಗಿದ್ದರಿಂದ 1 ಸಾವಿರ ದಂಡ ಇಲ್ಲವೇ 6 ತಿಂಗಳ ಸಜೆ, ಐಪಿಸಿ ಸೆಕ್ಷನ್ 354ಕ್ಕೂ ರು. 1 ಸಾವಿರ ದಂಡ ನೀಡಬೇಕು ಇಲ್ಲವೇ 3 ತಿಂಗಳ ಸಜೆ ಅನುಭವಿಸುವಂತೆ ಕೂಡ್ಲಿಗಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಎಸ್. ಹೊನ್ನಸ್ವಾಮಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ. ಆನಂದಪ್ಪ ವಾದ ಮಂಡಿಸಿದರು.