ಫೇಸ್ಬುಕ್ಕಲ್ಲೂ ಮೋದಿ ಫೇಮಸ್
ಟ್ವಿಟರ್ನಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದಿರುವ ಪ್ರಧಾನಿ ಮೋದಿ ಈಗ ...
1.8 ಕೋಟಿ ಲೈಕ್ಗಳು
84 ಕೋಟಿ ಜನರ ಮೊಬೈಲ್ನಲ್ಲಿ ಫೇಸ್ಬುಕ್
ಟ್ವಿಟರ್ನಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದಿರುವ ಪ್ರಧಾನಿ ಮೋದಿ ಈಗ ಫೇಸ್ಬುಕ್ನಲ್ಲೂ ಜನಪ್ರಿಯತೆ ಸಾಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಳಿಕ ಪ್ರಧಾನಿ ಮೋದಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 18 ದಶಲಕ್ಷ ಲೈಕ್ಗಳು ಅವರಿಗೆ ಪ್ರಾಪ್ತವಾಗಿವೆ. ಪ್ರಧಾನಿ ಮೋದಿ ತಾಯಿಯಿಂದ ಆಶೀರ್ವಾದ ಪಡೆಯುವ ಫೋಟೋ ಫೇಸ್ಬುಕ್ನಲ್ಲಿ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿತ್ತು. ವೈಯಕ್ತಿಕವಾಗಿ ತಮಗೂ ಅದು ಮೆಚ್ಚುಗೆಯಾಗಿದೆ ಎಂದು ಫೇಸ್ಬುಕ್ ಸಿಇಒ ಸಾಂಡ್ರಾ ಹೇಳಿಕೊಂಡಿದ್ದಾರೆ.