ಸಾಮೂಹಿಕ ಅತ್ಯಾಚಾರ
ಚೆನ್ನಪಟ್ಟಣದಲ್ಲಿ ಬಾಲಕಿಯೊಬ್ಬಳ 'ಹತ್ಯಾ'ಚಾರ ಪ್ರಕರಣದ ಬೆನ್ನಲ್ಲೇ ಮಾಲೂರು ತಾಲೂಕಿನ ಕುಪ್ಪೂರು ಗ್ರಾಮದಲ್ಲಿ...
ಕೋಲಾರ: ಚೆನ್ನಪಟ್ಟಣದಲ್ಲಿ ಬಾಲಕಿಯೊಬ್ಬಳ 'ಹತ್ಯಾ'ಚಾರ ಪ್ರಕರಣದ ಬೆನ್ನಲ್ಲೇ ಮಾಲೂರು ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗ್ರಾಮದ ನಾರಾಯಣಸ್ವಾಮಿ, ಕೃಷ್ಣ, ಮುನಿಕೃಷ್ಣ ಹಾಗೂ ಅನಿಲ್ ಕುಮಾರ್ ಎಂಬುವರ ವಿರುದ್ಧ ಬಾಲಕಿ ತಾಯಿ ದೂರು ದಾಖಲಿಸಿದ್ದಾರೆ. ಹಸಾಂಡಹಳ್ಳಿಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿ ಜೂ. 28ರಂದು ಎಂದಿನಂತೆ ತನ್ನ ಗ್ರಾಮಕ್ಕೆ ನಡೆದು ಹೊರಟಿದ್ದಾಗ ಈ ಆರೋಪಿಗಳು ಆಕೆಯನ್ನು ಹಿಂಬಾಲಿಸಿದ್ದಾರೆ. ಜತೆಗೆ ಹತ್ತಿರದ ದಾರಿಯಲ್ಲಿ ಗ್ರಾಮಕ್ಕೆ ಹೋಗಬಹುದೆಂದು ನಂಬಿಸಿ ಸಮೀಪದ ನೀಲಗಿರಿ ತೋಪಿಗೆ ಕರೆದೊಯ್ದಿದ್ದಾರೆ. ಅಲ್ಲಿ ಅತ್ಯಾಚಾರ ನಡೆಸಿ, ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಾಯಿ ತಿಮ್ಮಕ್ಕ ತಿಳಿಸಿದ್ದಾರೆ