ಆ.1ರೊಳಗೆ ಗ್ರಾಪಂನ 27000 ಹುದ್ದೆ ಕಾಯಂ
ಗ್ರಾಮ ಪಂಚಾಯಿತಿಯಲ್ಲಿ 27 ಸಾವಿರ ಹುದ್ದೆಗಳನ್ನು ಆ. 1ರೊಳಗೆ ಕಾಯಂ ಮಾಡಲು ಸರ್ಕಾರ ಅನುಮೋದನೆ...
ವಿಧಾನಸಭೆ: ಗ್ರಾಮ ಪಂಚಾಯಿತಿಯಲ್ಲಿ 27 ಸಾವಿರ ಹುದ್ದೆಗಳನ್ನು ಆ. 1ರೊಳಗೆ ಕಾಯಂ ಮಾಡಲು ಸರ್ಕಾರ ಅನುಮೋದನೆ ನೀಡಿದ್ದು, ಸಿಇಒಗಳನ್ನು ಇದನ್ನು ನಿರ್ವಹಿಸಲು ಆದೇಶಿಸಲಾಗಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.
ಗ್ರಾಪಂನ 27 ಸಾವಿರ ಹುದ್ದೆಗಳ ಕಾಯಂಗೆ ಅನುಮೋದನೆ ನೀಡಿದ್ದು, ಆ. 1ರೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇದಲ್ಲದೆ, 5679 ಡೇಟಾ ಎಂಟ್ರಿ ಆಪರೇಟರ್ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತಕ್ಷಣವೇ ನೇಮಕ ಮಾಡಿಕೊಳ್ಳಲಾಗುತ್ತದೆ. ಆಗಸ್ಟ್ ವೇಳೆಗೆ ಇವರೆಲ್ಲ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ 3-4 ಸಾವಿರ ಹುದ್ದೆಗಳ ಸಮಸ್ಯೆ ಉಳಿಯುತ್ತದೆ. ಇದರಲ್ಲಿ ವಾಟರ್ಮ್ಯಾನ್ಗಳಿಗೆ ಹೆಚ್ಚಿನ ಕೆಲಸ ಇಲ್ಲದಿರುವುದರಿಂದ ಆ ಹುದ್ದೆ ಉನ್ನತೀಕರಣಗೊಳಿಸಲಾಗುತ್ತಿದೆ. ವಾಟರ್ಮ್ಯಾನ್ಗಳು ಇನ್ನು ಬಿಲ್ ಕಲೆಕ್ಟರ್ಗಳಾಗಿ ತೆರಿಗೆ ಸಂಗ್ರಹದಂತಹ ಕೆಲಸ ಮಾಡಲಿದ್ದಾರೆ. ಇಲಾಖೆಯಲ್ಲಿ 39 ಸಾವಿರ ಹುದ್ದೆ ಖಾಲಿ ಇದ್ದು, ಹೊಸ ವ್ಯವಸ್ಥೆಯಲ್ಲಿ ಕನಿಷ್ಠ 9 ಜನ ಇರಬೇಕು. ಹೀಗಾಗಿ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು.