ದೆಹಲಿ ಟು ಆಗ್ರಾ 90 ನಿಮಿಷ!
ನಮ್ಮ ದೇಶದಲ್ಲೂ ಬುಲೆಟ್ ಟ್ರೈನ್ ಓಡಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆ...
ನವದೆಹಲಿ: ನಮ್ಮ ದೇಶದಲ್ಲೂ ಬುಲೆಟ್ ಟ್ರೈನ್ ಓಡಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆ ಸಾಕಾರಗೊಳ್ಳುವತ್ತ ಸಾಗುತ್ತಿದೆ. ನವೆಂಬರ್ ವೇಳೆಗೆ ಪ್ರಧಾನಿಯ ಕನಸು ನನಸಾಗಲಿದೆ. ಗಂಟೆಗೆ ಬರೋಬ್ಬರಿ 160 ಕಿ.ಮೀ. ಸಂಚರಿಸುವ ಸೆಮಿ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಗುರುವಾರ ಯಶಸ್ವಿಯಾಗಿ ನೆರವೇರಿದೆ. ಕೇವಲ 90 ನಿಮಿಷಗಳಲ್ಲಿ ರೈಲು ದೆಹಲಿಯಿಂದ ಆಗ್ರಾ ತಲುಪಲಿದೆ. 5400 ಎಚ್.ಪಿ. ಎಲೆಕ್ಟ್ರಾನಿಕ್ ಲೊಕೊಮೊಟಿವ್ ಹೊಂದಿರುವ ರೈಲು ಬೆಳಗ್ಗೆ 10 ಗಂಟೆಗೆ ದೆಹಲಿಯಿಂದ ಪ್ರಾಯೋಗಿಕ ಸಂಚಾರ ಆರಂಭಿಸಿತು. ರೈಲು ಸುಗಮವಾಗಿ ಸಂಚರಿಸುತ್ತಿದೆ ಎಂಬುದನ್ನು ಖಾತ್ರಿಪಡಿಸಲು ದಾರಿಯುದ್ದಕ್ಕೂ ಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
16 ವೇಗ ತಡೆ ವಲಯ: ದೆಹಲಿ-ಆಗ್ರಾ ರಸ್ತೆಯಲ್ಲಿ ಸುಮಾರು 16 ವೇಗ ತಡೆ ವಲಯಗಳಿದ್ದು, ವೇಗ ಹೆಚ್ಚಿಸುವ ಉದ್ದೇಶದಿಂದ ಇವುಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ರೇಲ್ವೆ ಸುರಕ್ಷತೆ ಆಯುಕ್ತ ಪಿ.ಕೆ. ವಾಜಪೇಯಿ ತಿಳಿಸಿದ್ದಾರೆ.