ಶಿಸ್ತು ಸಮಿತಿಗೆ ಪ್ರಕರಣ
ಪಬ್ನಲ್ಲಿ ಪೊಲೀಸರ ಮೇಲೆ ದುಂಡಾವರ್ತನೆ ಪ್ರದರ್ಶಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್...
ಬೆಂಗಳೂರು: ಪಬ್ನಲ್ಲಿ ಪೊಲೀಸರ ಮೇಲೆ ದುಂಡಾವರ್ತನೆ ಪ್ರದರ್ಶಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರಕರಣವನ್ನು ಶಾಸಕ ಡಾ.ಮಾಲಕ ರೆಡ್ಡಿ ನೇತೃತ್ವದ ಶಿಸ್ತು ಸಮಿತಿಗೆ ಒಪ್ಪಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪ್ರದೇಶ ಕಾಂಗ್ರೆಸ್ ಸಮಿತಿ ಈ ಕ್ರಮ ತೆಗೆದುಕೊಂಡಿದೆ. ಜತೆಗೆ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಯುವ ಕಾಂಗ್ರೆಸ್ ಸಮಿತಿ ಮಾಜಿ ಸದಸ್ಯ ಹಾಗೂ ಶಾಸಕ ಕಾಶಪನವರ್ ಸಹಚರ ಸೋಮಶೇಖರ್ ಗೌಡ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್ನಿಂದ ಉಚ್ಚಾಟಿಸಲಾಗಿದೆ