ಬೇನಿವಾಲ್ ಮಿಜೋರಾಂಗೆ
ಗುಜರಾತ್ ರಾಜ್ಯಪಾಲ ಕಮಲಾ ಬೇನಿವಾಲ್ರನ್ನು ಮಿಜೋರಾಂಗೆ ವರ್ಗಾಯಿಸಲಾಗಿದೆ. ಮಾರ್ಗರೆಟ್...
ನವದೆಹಲಿ: ಗುಜರಾತ್ ರಾಜ್ಯಪಾಲ ಕಮಲಾ ಬೇನಿವಾಲ್ರನ್ನು ಮಿಜೋರಾಂಗೆ ವರ್ಗಾಯಿಸಲಾಗಿದೆ. ಮಾರ್ಗರೆಟ್ ಆಳ್ವಾ ರಾಜಸ್ಥಾನದ ರಾಜ್ಯಪಾಲರಾಗಿ ಮುಂದುವರಿಯಲಿದ್ದಾರೆ. ಜತೆಗೆ ಗುಜರಾತ್ನ ಹೆಚ್ಚುವರಿ ಹೊಣೆ ನೀಡಲಾಗಿದೆ. ಮಿಜೋರಾಂ ರಾಜ್ಯಪಾಲರಾಗಿರುವ ವಕ್ಕಂ ಪುರುಷೋತ್ತಮನ್ ನಾಗಾಲ್ಯಾಂಡ್ನ ಹೊಸ ರಾಜ್ಯಪಾಲರಾಗಲಿದ್ದಾರೆ. ಅವರು ತ್ರಿಪುರಾ ರಾಜ್ಯಪಾಲರ ಹೆಚ್ಚುವರಿ ಹೊಣೆಯನ್ನೂ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕ ಮತ್ತು ತ್ರಿಪುರಾದ ರಾಜ್ಯಪಾಲರು ಈಗಾಗಲೇ ತಮ್ಮ ಅಧಿಕಾರದ ಅವಧಿಯನ್ನು ಮುಕ್ತಾಯಗೊಳಿಸಿದ್ದಾರೆ.