ಮೇಲ್ಮನೆ ಸಭಾಪತಿ ಸ್ಥಾನ 'ಕೈ'ವಶ?
ವಿಧಾನಪರಿಷತ್ ಸಭಾಪತಿ ಬದಲಾಗಲಿದ್ದಾರೆ! ಹೌದು, ಇಂತಹ ಒಂದು...
ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬದಲಾಗಲಿದ್ದಾರೆ! ಹೌದು, ಇಂತಹ ಒಂದು ಪ್ರಯತ್ನಕ್ಕೆ ಕಾಂಗ್ರೆಸ್ ಸದ್ಯದಲ್ಲಿಯೇ 'ಕೈ' ಹಾಕಲಿದೆ. ವಿಧಾನಪರಿಷತ್ನಲ್ಲಿ ತನಗೆ ಅನುಕೂಲವಾಗುವಂತೆ ಕಲಾಪ ನಡೆಸಲು ತನ್ನದೇ ಪಕ್ಷದವರನ್ನು ಸಭಾಪತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸಂಖ್ಯಾಬಲದ ಕೊರತೆಯಿಂದ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರನ್ನೇ ಅಧಿಕಾರಕ್ಕೆ ಬಂದ ಮೇಲೂ ಕಾಂಗ್ರೆಸ್ ಮುಂದುವರಿಸಿತ್ತು. ಆದರೆ, ಇದೀಗ ಪರಿಸ್ಥಿತಿ ಹಾಗೇ ಉಳಿದಿಲ್ಲ. ವಿಧಾನಪರಿಷತ್ನ 75 ಸ್ಥಾನಗಳಲ್ಲಿ 28 ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ಗೆ ಪಕ್ಷೇತರರಾಗಿರುವ ಎಂ.ಡಿ. ಲಕ್ಷ್ಮೀನಾರಾಯಣ ಈಗಾಗಲೇ ಸೇರಿಕೊಂಡಿದ್ದಾರೆ. ಬಿ.ಎಸ್. ಸುರೇಶ್ ಕೂಡ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಬಲ 30ಕ್ಕೇರಿದೆ. ಇನ್ನು ಜೆಡಿಎಸ್ 'ಕೈ' ಜೋಡಿಸಿದರಂತೂ ಯಾವುದೇ ತೊಂದರೆ ಉಂಟಾ ಗದು. ಕಾಂಗ್ರೆಸ್ ತನಗೆ ಬೇಕಾದವರನ್ನೇ ಸಭಾಪತಿಯನ್ನಾಗಿ ಮಾಡಿಕೊಳ್ಳಬಹುದು.