ಫೇಸ್ಬುಕ್ನಲ್ಲೇ ರೇಲ್ವೆ ಮಾಹಿತಿ
ಮಾಜಿ ಪ್ರಧಾನಿ, ಹಾಲಿ ಪ್ರಧಾನಿ, ಆಡಳಿತ ಪಕ್ಷ, ವಿಪಕ್ಷ... ಎಲ್ಲರೂ ತಮ್ಮ ಸ್ವಂತ ಖಾತೆ ಕೆರೆದು ಸಾಮಾಜಿಕ...
ನವದೆಹಲಿ: ಮಾಜಿ ಪ್ರಧಾನಿ, ಹಾಲಿ ಪ್ರಧಾನಿ, ಆಡಳಿತ ಪಕ್ಷ, ವಿಪಕ್ಷ... ಎಲ್ಲರೂ ತಮ್ಮ ಸ್ವಂತ ಖಾತೆ ಕೆರೆದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ರೈಲ್ವೆ ಸಚಿವಾಲಯದ ಸರದಿ. ರೇಲ್ವೆ ಬಜೆಟ್ ಮಂಡಣೆಯಾದ ಕೂಡಲೇ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ಹಾಕಲಿದೆ. ಜನರಿಗೆ ಎಲ್ಲ ಮಾಹಿತಿ ಕೂಡಲೇ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಸದಾನಂದ ಗೌಡ ತಿಳಿಸಿದ್ದಾರೆ. ಯೂಟ್ಯೂಬ್ನಲ್ಲೂ ತಮ್ಮ ಛಾಪು ಮೂಡಿಸಲಿದೆ. ಇದರ ಹಿಂದೆ ಪ್ರಧಾನಿ ಮೋದಿಯವರ ಆಲೋಚನೆಯಿದೆ. ಪ್ರತಿಯೊಬ್ಬರಿಗೂ ಮಾಹಿತಿ ಸುಲಭವಾಗಿ ಲಭ್ಯವಾಗಲು ಸಾಮಾಜಿಕ ಜಾಲತಾಣಗಳಲ್ಲಿ ಉಪಸ್ಥಿತಿ ಅಗತ್ಯ ಎಂದು ಮೋದಿ ಹೇಳಿದ್ದಾರೆ. ಅದಲ್ಲದೆ 022-4501555 ಎಂಬ ಸಂಖ್ಯೆಗೆ ಕರೆ ಮಾಡಿ ಬಜೆಟ್ ಬಗ್ಗೆ ತಿಳಿದುಕೊಳ್ಳಬಹುದು. ಜನರ ಹಿತದೃಷ್ಟಿಯಿಂದಲೇ ಬಜೆಟ್ ತಯಾರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.