ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಒಟ್ಟು 58,ಇವಿಷ್ಟು ಹೊಸ ರೈಲುಗಳು

ಹೊಸದಾಗಿ 58 ರೈಲುಗಳಿಗೆ ಚಾಲನೆ ನೀಡಲಿದ್ದೇವೆ. ಈಗಾಗಲೇ ಇರುವ 11 ರೈಲುಗಳನ್ನು ವಿಸ್ತರಿಸಲಾಗುವುದು...

Rashmi Kasaragodu
Updated On : 9 Jul 2014, 1:28 am

ಹೊಸದಾಗಿ 58 ರೈಲುಗಳಿಗೆ ಚಾಲನೆ ನೀಡಲಿದ್ದೇವೆ. ಈಗಾಗಲೇ ಇರುವ 11 ರೈಲುಗಳನ್ನು ವಿಸ್ತರಿಸಲಾಗುವುದು. 9 ಮಾರ್ಗಗಳಿಗೆ ವಜ್ರ ಚತುಷ್ಪಥ ನಿರ್ಮಿಸಿ ಅತಿ ವೇಗದ ರೈಲುಗಳನ್ನು ಒದಗಿಸಲಿದ್ದೇವೆ. ಅದಲ್ಲದೆ ಮುಂಬೈ- ಅಹಮದಾಬಾದ್ ಮಾರ್ಗಕ್ಕೆ ಬುಲ್ಲೆಟ್ ರೈಲನ್ನು ಆರಂಭಿಸುವ ಪ್ರಸ್ತಾವವನ್ನು ಮುಂದೆ ಹಾಕಿದ್ದೇವೆ. 5 ಜನಸಾಧಾರಣ ರೈಲುಗಳು, 5 ಪ್ರೀಮಿಯಂ ರೈಲುಗಳು, 6 ಎಸಿ ಎಕ್ಸ್ಪ್ರೆಸ್ ರೈಲುಗಳು, 27 ಎಕ್ಸ್ಪ್ರೆಸ್ ರೈಲುಗಳು, 8 ಪ್ಯಾಸೆಂಜರ್ ರೈಲುಗಳು, 2 ಮೆಮು ಮತ್ತು 5 ಡೆಮು ಸೇವೆಗಳನ್ನು ಈ ವರ್ಷ ಆರಂಭಿಸಲಿದ್ದೇವೆ. ಹಬ್ಬ, ರಜೆ ಮತ್ತು ವಿಶೇಷ ದಿನಗಳಲ್ಲಿ ರೈಲ್ವೆ ಬೇಡಿಕೆಗಳನ್ನು ಈಡೇರಿಸಲು ವಿಶೇಷ ರೈಲುಗಳನ್ನು ಒದಗಿಸಲಾಗುವುದು. ಹೀಗೆಂದು ಹೇಳಿದವರು ರೈಲ್ವೆ ಸಚಿವರಾದ ಸದಾನಂದ ಗೌಡ. ರೈಲ್ವೆ ಬಜೆಟ್ ಮಂಡಣೆ ವೇಳೆ ಸಚಿವಾಲಯ ಹೊರತರಲಿರುವ ಎಲ್ಲ ಯೋಜನೆಗಳ ಬಗ್ಗೆ ವಿವರಿಸಿದರು. ಈ ಪಟ್ಟಿಯಲ್ಲಿರುವ 58 ರೈಲ್ವೆ ಮಾರ್ಗಗಳು ಈ ರೀತಿಯಿವೆ:


    ಈಗಿರುವ   ರೈಲುಗಳ ವಿಸ್ತರಣೆ



-  22409/22410 ಆನಂದ್ ವಿಹಾರ್ ಸಾಸಾರಾಂ ಗರೀಬ್ ರಥ ಎಕ್ಸ್ಪ್ರೆಸ್- ಗಯಾ
-  12455/12456 ದೆಹಲಿ ಸರಾಯ್ ರೋಹಿಲ್ಲಾ ಶ್ರೀಗಂಗಾನಗರ್ ಎಕ್ಸ್ಪ್ರೆಸ್- ಬಿಕಾನೇರ್
-  15231/15232 ಗೋಂದಿಯಾ ಮುಜಫ್ಫರ್ಪುರ ಎಕ್ಸ್ಪ್ರೆಸ್- ಬರೌನಿ
-  12001/12002 ನವದೆಹಲಿ ಭೋಪಾಲ ಶತಾಬ್ದಿ ಎಕ್ಸ್ಪ್ರೆಸ್- ಹಬೀಬ್ಗಂಜ್
-  54602 ಲುಧಿಯಾನಾ- ಹಿಸಾರ್ ಪ್ಯಾಸೆಂಜರ್- ಸಾದುಲ್ಪುರ
- 55007/55008 ಸೋನ್ಪುರ- ಕಪ್ತಾನ್ಗಂಜ್ ಪ್ಯಾಸೆಂಜರ್- ಗೋರಖ್ಪುರ
-  55072/55073 ಗೋರಖ್ಪುರ- ಥಾವೆ ಪ್ಯಾಸೆಂಜರ್- ಸಿವಾನಾ
-  63237/63238 ಬಕ್ಸರ್- ಮುಗಲ್ಸರಾಯ್ ಮೆಮು- ವಾರಾಣಸಿ
- 63208/63211 ಝಾಝಾ- ಪಟನಾ ಮೆಮು- ಜಸೀಡಿಹ್
-  64221/64222 ಲಖನೌ ಹರದೊಯಿ ಮೆಮು- ಶಹಜಹಾನಪುರ
-  68002/68007 ಹೌವ್ರಾ- ಬೆಲ್ದಾ ಮೆಮು - ಜಲೆಸ್ವರ್



ಜನಸಾಧಾರಣ ರೈಲುಗಳು
-  ಅಹಮದಾಬಾದ್- ದರ್ಭಂಗಾ ಜನಸಾಧಾರಣ ಎಕ್ಸ್ಪ್ರೆಸ್ (ಸೂರತ್ ಮೂಲಕ)
-  ಜಯನಗರ್- ಮುಂಬೈ ಜನಸಾಧಾರಣ ಎಕ್ಸ್ಪ್ರೆಸ್
-  ಮುಂಬೈ- ಗೋರಖ್ಪುರ ಜನಸಾಧಾರಣ ಎಕ್ಸ್ಪ್ರೆಸ್
-  ಸಹರಸಾ- ಆನಂದ್ ವಿಹಾರ್ ಜನಸಾಧಾರಣ ಎಕ್ಸ್ಪ್ರೆಸ್ (ಮೋತಿಹಾರಿ ಮೂಲಕ)
- ಸಹರಸಾ- ಅಮೃತಸರ ಜನಸಾಧಾರಣ ಎಕ್ಸ್ಪ್ರೆಸ್


ಪ್ರೀಮಿಯಂ ರೈಲುಗಳು


-  ಮುಂಬೈ ಸೆಂಟ್ರಲ್- ನವದೆಹಲಿ ಪ್ರೀಮಿಯಂ ಎಸಿ ಎಕ್ಸ್ಪ್ರೆಸ್
-  ಶಾಲಿಮಾರ್- ಚೆನ್ನೈ ಪ್ರೀಮಿಯಂ ಎಸಿ ಎಕ್ಸ್ಪ್ರೆಸ್
-  ಸಿಕಂದರಾಬಾದ್- ಹಜರತ್ ನಿಝಾಮುದ್ಧೀನ್ ಪ್ರೀಮಿಯಂ ಎಸಿ ಎಕ್ಸ್ಪ್ರೆಸ್
-  ಜೈಪುರ- ಮದುರೈ ಪ್ರೀಮಿಯಂ ಎಕ್ಸ್ಪ್ರೆಸ್
-  ಕಾಮಾಖ್ಯಾ- ಬೆಂಗಳೂರು ಪ್ರೀಮಿಯಂ ಎಕ್ಸ್ಪ್ರೆಸ್


         ಪ್ಯಾಸೆಂಜರ್      ರೈಲುಗಳು
- ಬಿಕಾನೇರ್- ರೇವಾರಿ ಪ್ಯಾಸೆಂಜರ್ (ಪ್ರತಿ ದಿನ)
- ಧಾರವಾಡ- ದಾಂಡೇಲಿ ಪ್ಯಾಸೆಂಜರ್ (ಪ್ರತಿ ದಿನ) ಅಳನಾವರ ಮೂಲಕ
- ಗೋರಖ್ಪುರ- ನೌತನವಾ ಪ್ಯಾಸೆಂಜರ್ (ಪ್ರತಿ ದಿನ)
- ಗುವಾಹಾಟಿ- ಮೆಂಡಿಪಥಾರ್ ಪ್ಯಾಸೆಂಜರ್ (ಪ್ರತಿ ದಿನ)
- ಹಟಿಯಾ- ರಾವುರ್ಕೆಲಾ ಪ್ಯಾಸೆಂಜರ್
- ಬೈಂದೂರು- ಕಾಸರಗೋಡುಪ್ಯಾಸೆಂಜರ್ (ಪ್ರತಿ ದಿನ)
- ರಂಗಪರ ಉತ್ತರ- ರಂಗಿಯಾ ಪ್ಯಾಸೆಂಜರ್ (ಪ್ರತಿ ದಿನ)
- ಯಶವಂತಪುರ- ತುಮಕೂರು ಪ್ಯಾಸೆಂಜರ್ (ಪ್ರತಿ ದಿನ)


ಡೆಮು ಸೇವೆಗಳು
- ಬೆಂಗಳೂರು- ನೆಲಮಂಗಲ (ಪ್ರತಿ ದಿನ)
- ಛಪರಾ- ಮಂದುವಾದಿ (ವಾರದಲ್ಲಿ 6 ದಿನ) ಬಲ್ಲಿಯಾ ಮೂಲಕ
-ಬಾರಾಮುಲ್ಲ- ಬನಿಹಾಲ್ (ಪ್ರತಿ ದಿನ)
- ಸಂಬಲ್ಪುರ- ರಾವುರ್ಕೆಲಾ (ವಾರದಲ್ಲಿ 6 ದಿನ)
- ಯಶವಂತಪುರ- ಹೊಸೂರು (ವಾರದಲ್ಲಿ 6 ದಿನ)


ಮೆಮು ಸೇವೆಗಳು
ಬೆಂಗಳೂರು- ರಾಮಾನಗರ (ವಾರದಲ್ಲಿ 6 ದಿನ- 3 ಜೋಡಿ)
ಪಲವಲ್- ದೆಹಲಿ- ಆಲಿಗಡ



    ಎಕ್ಸ್ಪ್ರೆಸ್ ರೈಲುಗಳು



-  ಅಹಮದಾಬಾದ್- ಪಟನಾ ಎಕ್ಸ್ಪ್ರೆಸ್ (ಸಪ್ತಾಹಿಕ) ವಾರಾಣಸಿ ಮೂಲಕ
-  ಅಹಮದಾಬಾದ್ ಚೆನ್ನೈ ಎಕ್ಸ್ಪ್ರೆಸ್ (ವಾರದಲ್ಲಿ 2 ದಿನ) ವಸಯಿ ರೋಡ್ ಮೂಲಕ
-  ಬೆಂಗಳೂರು- ಮಂಗಳೂರು ಎಕ್ಸ್ಪ್ರೆಸ್ (ಪ್ರತಿ ದಿನ)
- ಬೆಂಗಳೂರು- ಶಿವಮೊಗ್ಗ ಎಕ್ಸ್ಪ್ರೆಸ್ (ವಾರದಲ್ಲಿ ಎರಡು ದಿನ)
- ಬಾಂದ್ರಾ(ಟಿ)- ಜೈಪುರ ಎಕ್ಸ್ಪ್ರೆಸ್ (ಸಾಪ್ತಾಹಿಕ) ನಾಗ್ಡಾ, ಕೋಟಾ ಮೂಲಕ
-  ಬೀದರ್- ಮುಂಬೈ ಎಕ್ಸ್ಪ್ರೆಸ್ (ಸಪ್ತಾಹಿಕ)
-  ಛಪರಾ- ಲಖನೌ ಎಕ್ಸ್ಪ್ರೆಸ್ (ವಾರದಲ್ಲಿ 3 ದಿನ) ಬಲ್ಲಿಯ, ಘಝಿಪುರ, ವಾರಾಣಸಿ ಮೂಲಕ
-  ಫಿರೋಝ್ಪುರ- ಚಂಡೀಗಡ ಎಕ್ಸ್ಪ್ರೆಸ್ (ವಾರದಲ್ಲಿ 6 ದಿನ)
- ಗುವಾಹಾಟಿ- ನಹಾರ್ಲಗೂನ್ ಇಂಟರ್ಸಿಟಿ ಎಕ್ಸ್ಪ್ರೆಸ್ (ಪ್ರತಿ ದಿನ)
-  ಗುವಾಹಾಟಿ- ಮುರ್ಕೋಂಗಸೆಲೆಕ್ ಇಂಟರ್ಸಿಟಿ ಎಕ್ಸ್ಪ್ರೆಸ್ (ಪ್ರತಿ ದಿನ)
-  ಗೋರಖ್ಪುರ- ಆನಂದ್ ವಿಹಾರ್ ಎಕ್ಸ್ಪ್ರೆಸ್ (ಸಾಪ್ತಾಹಿಕ)
-  ಹಪಾ- ಬಿಲಾಸ್ಪುರ ಎಕ್ಸ್ಪ್ರೆಸ್ (ಸಾಪ್ತಾಹಿಕ) ನಾಗ್ಪುರ ಮೂಲಕ
-  ಹಜೂರ್ ಸಾಹಿಬ್ ನಾಂದೇಡ್- ಬಿಕಾನೇರ್ ಎಕ್ಸ್ಪ್ರೆಸ್ (ಸಾಪ್ತಾಹಿಕ)
-  ಇಂದೋರ್- ಜಮ್ಮು ತವಿ ಎಕ್ಸ್ಪ್ರೆಸ್ (ಸಾಪ್ತಾಹಿಕ)
 - ಕಾಮಾಖ್ಯಾ- ಕತ್ರಾ ಎಕ್ಸ್ಪ್ರೆಸ್ (ಸಾಪ್ತಾಹಿಕ) ದರ್ಭಂಗಾ ಮೂಲಕ
-  ಕಾನ್ಪುರ- ಜಮ್ಮು ತವಿ ಎಕ್ಸ್ಪ್ರೆಸ್ (ವಾರಾದಲ್ಲಿ ಎರಡು ದಿನ)
-  ಲೋಕಮಾನ್ಯ ತಿಲಕ(ಟಿ)- ಅಜಂಗಡ ಎಕ್ಸ್ಪ್ರೆಸ್ (ಸಾಪ್ತಾಹಿಕ)
-  ಮುಂಬೈ- ಕಾಜೀಪೇಟ್ ಎಕ್ಸ್ಪ್ರೆಸ್ (ಸಾಪ್ತಾಹಿಕ) ಬಲ್ಹಾರ್ಶಾಹ್ ಮೂಲಕ
- ಮುಂಬೈ- ಪಾಲೀತಾನಾ ಎಕ್ಸ್ಪ್ರೆಸ್ (ಸಾಪ್ತಾಹಿಕ)
- ನವದೆಹಲಿ- ಭಟಿಂಡ ಶತಾಬ್ದಿ ಎಕ್ಸ್ಪ್ರೆಸ್ (ವಾರದಲ್ಲಿ ಎರಡು ದಿನ)
-  ನವದೆಹಲಿ- ವಾರಾಣಸಿ ಎಕ್ಸ್ಪ್ರೆಸ್ (ಪ್ರತಿ ದಿನ)
-  ಪಾರಾದೀಪ್- ಹೌರಾ ಎಕ್ಸ್ಪ್ರೆಸ್ (ಸಾಪ್ತಾಹಿಕ)
- ಪಾರಾದೀಪ್- ವಿಶಾಖಪಟ್ಟಣ ಎಕ್ಸ್ಪ್ರೆಸ್ (ಸಾಪ್ತಾಹಿಕ)
-  ರಾಜಕೋಟ- ರೇವಾ ಎಕ್ಸ್ಪ್ರೆಸ್ (ಸಾಪ್ತಾಹಿಕ)
-  ರಾಮನಗರ- ಆಗ್ರಾ ಎಕ್ಸ್ಪ್ರೆಸ್ (ಸಾಪ್ತಾಹಿಕ)
-  ಟಾಟಾನಗರ ಬೈಯಪ್ಪನಹಳ್ಳಿ (ಬೆಂಗಳೂರು) ಎಕ್ಸ್ಪ್ರೆಸ್ (ಸಾಪ್ತಾಹಿಕ)
-  ವಿಶಾಖಪಟ್ಟಣ- ಚೆನ್ನೈ ಎಕ್ಸ್ಪ್ರೆಸ್ (ಸಾಪ್ತಾಹಿಕ)


ಎಸಿ ಎಕ್ಸ್ಪ್ರೆಸ್ ರೈಲುಗಳು
ವಿಜಯವಾಜಾ- ನವದೆಹಲಿ- ಎಪಿ ಎಕ್ಸ್ಪ್ರೆಸ್ (ಪ್ರತಿ ದಿನ)
ಲೋಕಮಾನ್ಯ ತಿಲಕ (ಟಿ)- ಲಖನೌ (ಸಾಪ್ತಾಹಿಕ)
ನಾಗ್ಪುರ- ಪುಣೆ (ಸಾಪ್ತಾಹಿಕ)
 ನಾಗ್ಪುರ- ಅಮೃತಸರ (ಸಾಪ್ತಾಹಿಕ)
 ನಹಾರ್ಲಗೂನ್- ನವದೆಹಲಿ (ಸಾಪ್ತಾಹಿಕ)
ನಿಝಾಮುದ್ಧೀನ್- ಪುಣೆ (ಸಾಪ್ತಾಹಿಕ)


ಹೊಸ ಸಮೀಕ್ಷೆಗಳ ಪಟ್ಟಿ ಹೊಸ ಮಾರ್ಗಗಳು

1) ಕಾಞಗಾಡ್- ಪಾಣತ್ತೂರು- ಕಾಣಿಯೂರು
2) ಮುಗಲ್ಸರಾಯ್- ಭಭುವಾ (ನೌಗಡ ಮೂಲಕ)
3) ಹೋಶಿಯಾರ್ಪುರ- ಅಂಬ್- ಅಂದೌರಾ
4) ಔರಂಗಾಬಾದ್- ಚಾಲೀಸ್ಗಾಂವ್
5) ಸಿಂಗರೌಲಿ- ಘೋರಾವಾಲ್ ಲೂಸ
6) ಗಬ್ಬುರ್- ಬಳ್ಳಾರಿ ,  7) ಶಿವಮೊಗ್ಗ- ಶ್ರಿಂಗೇರಿ- ಮಂಗಳೂರು
8) ಬದೊವನ್- ಜಾಡಗ್ರಾಂ (ಚಾಂಡಿಲ್ ಮೂಲಕ)
9) ತಾಳಗುಪ್ಪ- ಸಿದ್ಧಾಪುರ,   10) ಭಭುವಾ- ಮುಂಡೇಶ್ವರಿ
11) ಜೀಂದ್- ಹಿಸಾರ್,     12) ಗದಗ- ಹಾರಾಪ್ಪನಹಳ್ಳಿ
13) ಉನಾ- ಹಮೀರ್ಪುರ
14) ಉಜ್ಜೈನಿ- ಝಾಲಾವಾಡ್- ಅಗರ್- ಸುಸನೇರ್- ಸೋಯತ್
15) ಹಿಸಾರ್- ನರವಾನಾ
16) ಸೋಲಾಪುರ- ತುಳಜಾಪುರ
17) ಚಾರ್ ಧಾಂ, ಕೇದಾರನಾಥ, ಬದರಿನಾಥ
18) ನಯಾಗಡ- ಬನ್ಸ್ಪಾನಿ ಕಬ್ಬಿಣದ ಅದಿರಿನ ಗಣಿಗಳು


      ಜೋಡಿ ಮಾರ್ಗ, 3 ಮತ್ತು    4ನೇ  ಮಾರ್ಗಗಳು ಮತ್ತು ಗೇಜ್ ಪರಿವರ್ತನೆ







1) ಜೈಪುರ- ಕೋಟಾ ಜೋಡಿ ಮಾರ್ಗ
2) ಚಾಂದನಾ- ಕೋಟೆ- ನಾಗ್ಭಿರ್ ಜೋಡಿ ಮಾರ್ಗ
3) ಮಂಗಳೂರು- ಉಳ್ಳಾಲ- ಸುರತ್ಕಲ್ ಜೋಡಿ ಮಾರ್ಗ
4) ರೇವಾರಿ- ಮಹೇಂದರ್ಗಡ ಜೋಡಿ ಮಾರ್ಗ
5) ಭುಸಾವಲ್- ಬಡನೆರಾ- ವರ್ಧಾ3ನೇ ಮಾರ್ಗ
6) ಕಸಾರಾ- ಇಗತ್ಪುರಿ 4ನೇ ಮಾರ್ಗ
7) ಕರ್ಜತ್- ಲೋನಾವಲಾ 4ನೇ ಮಾರ್ಗ
8) ಇಟಾರಸಿ- ಭುಸಾವಲ್ 3ನೇ ಮಾರ್ಗ
9) ಗೇಜ್ ಪರಿವರ್ತನೆ: ಅಹಮದಾಬಾದಿನಿಂದ ಮೆಹಸಾನಾ ವರೆಗೆ ಮೀಟರ್ ಗೇಜ್ ಪರಿವರ್ತನೆ10) ಗೇಜ್ ಪರಿವರ್ತನೆ: ಪಿಲಿಭಿತ್- ಶಹಜಹಾನಪುರ



ಇತ್ತೀಚೆಗೆ ಮಾಡಿದ ಪ್ರಯಾಣ ದರ ಏರಿಕೆಯಿಂದ ಉಳಿತಾಯ- 8000 ಕೋಟಿ


ಬಜೆಟ್ನಲ್ಲಿ ಸಿಕ್ಕ ಅನುದಾನ -30,223 ಕೋಟಿ

 ರೈಲ್ವೆ ಲೋಡಿಂಗ್ ಗುರಿ - 1,047 ದಶಲಕ್ಷ ಟನ್

ಆಂತರಿಕ ಸಂಪನ್ಮೂಲ -10,418 ಕೋಟಿ

 ಹೆಚ್ಚುವರಿ ಬಜೆಟ್ ಸಂಪನ್ಮೂಲ - 19,805 ಕೋಟಿ

ಬುಲೆಟ್ ರೈಲಿನ ಒಟ್ಟು ಯೋಜನೆಗೆ ಆಗುವ ವೆಚ್ಚ -60,000 ಕೋಟಿ

ರೈಲ್ವೆಗೆ ಸಂದಾಯ ಆಗಲಿರುವ ಅಂದಾಜು ಮೊತ್ತ -1,60,775 ಕೋಟಿ

10 ವರ್ಷಗಳಲ್ಲಿ ರೈಲ್ವೆ ಆಧುನೀಕರಣಕ್ಕೆ ಬೇಕಾದ ವೆಚ್ಚ - 500000 ಕೋಟಿ

ವಜ್ರ ಚತುಷ್ಪಥ ಯೋಜನೆಗೆ ಬೇಕಾಗುವ ಮೊತ್ತ -900000 ಕೋಟಿ


ಫುಡ್ ಕೋರ್ಟ್



ರೈಲಲ್ಲಿ ಹಳಸಿದ ಆಹಾರ ತಿಂದು ಬೇಸತ್ತಿದ್ದೀರಾ? ಮುಂದಿನ ನಿಲ್ದಾಣದಲ್ಲಿ ತಿನ್ನಲು ಏನಾದರೂ ಸಿಗಬಹುದೇ ಎಂದು ಆಲೋಚಿಸುತ್ತಿದ್ದರೆ, ಹೈಟೆಕ್ ರೀತಿಯಲ್ಲಿ ಹೊಟ್ಟೆ ತುಂಬಿಸುವ ಪ್ರಯತ್ನ ಮಾಡಿದ್ದೇವೆ.
- ಕುಡಿಯುವ ನೀರಿನ ಜತೆಗೆ ಸ್ವಾದದ ಆಹಾರ ಉಣಿಸಲು ಪ್ರಮುಖ ನಿಲ್ದಾಣಗಳಲ್ಲಿ ಫುಡ್ ಕೋರ್ಟ್ ಆರಂಭ.
-ಪ್ರಾಯೋಗಿಕವಾಗಿ ನವದೆಹಲಿ- ಅಮೃತಸರ  ಹಾಗೂ ನವದೆಹಲಿ- ಜಮ್ಮು ತವಿ ವಿಭಾಗದಲ್ಲಿ ಯೋಜನೆ ಆರಂಭ.
- ನಿಲ್ದಾಣಕ್ಕೆ ಆಗಮಿಸುವ ಮೊದಲೇ ಮಿಂಚಂಚೆ, ಎಸ್ಎಂಎಸ್ ಹಾಗೂ ಮೊಬೈಲ್ ಆ್ಯಪ್ಗಳ ಮೂಲಕ ಆಹಾರವನ್ನು ಮುಂಗಡವಾಗಿ ಪಡೆಯಬಹುದು.
- ನಿಲ್ದಾಣಗಳಲ್ಲಿ 'ರೆಡಿ ಟು ಈಟ್' ಆಹಾರ ವಿತರಣೆ ವ್ಯವಸ್ಥೆ.
- ಆಹಾರ ಗುಣಮಟ್ಟ ಕಾಪಾಡಲು ಮೂರನೇ ಸಂಸ್ಥೆಯ ಮೂಲಕ ಪರೀಕ್ಷೆ ನಡೆಸಲಾಗುತ್ತದೆ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.
- ಆಹಾರ ಗುಣಮಟ್ಟ ಕುರಿತಂತೆ ಪ್ರಮಾಣಪತ್ರ ನೀಡುವ ಅಧಿಕಾರ ಪ್ರಯಾಣಿಕರಿಗೂ ಲಭ್ಯವಾಗಲಿದೆ, ದೂರು ಆಧರಿಸಿ ಗುತ್ತಿಗೆದಾರರ ಪರವಾನಗಿ ರದ್ದು.
ಹೈಟೆಕ್ ರೈಲು
ರೈಲಲ್ಲಿ ಪ್ರಯಾಣಿಸುವುದಕ್ಕಿಂತ ಟಿಕೆಟ್ ತೆಗೆದುಕೊಳ್ಳುವುದೇ ನಿಮಗೆ ದೊಡ್ಡ ಸಾಹಸವಾಗಿದೆ. ಬಿಸಿಲಲ್ಲಿ ನಿಂತು ಬೆವರು ಒರೆಸಿಕೊಳ್ಳುವುದನ್ನು, ಚಳಿಯಲ್ಲಿ ನಡುಗುವುದನ್ನು ನಿಲ್ಲಿಸಲಾಗುವುದು. ಆನ್ಲೈನ್ನಲ್ಲಿ ಗಂಟೆಗಟ್ಟಲೆ 'ಸರ್ವರ್ ಬ್ಯುಸಿ' ಎಂದು ತಲೆಕೆಡಿಸಿಕೊಳ್ಳುವುದಕ್ಕೆ ಇನ್ನು ಬ್ರೇಕ್ ಬೀಳಲಿದೆ. ಇನ್ನೈದು ವರ್ಷದಲ್ಲಿ ರೈಲ್ವೆ ಇಲಾಖೆಗೆ ಹೈಟೆಕ್ ಸ್ಪರ್ಶ ನೀಡಿ, ಕಾಗದ ರಹಿತ ಕಚೇರಿ ಮಾಡುತ್ತೇವೆ.
- ಮೊಬೈಲ್ ಫೋನ್ ಹಾಗೂ ಅಂಚೆ ಕಚೇರಿಯಲ್ಲಿ ಮುಂಗಡ ಟಿಕೆಟ್ ಸೌಲಭ್ಯ.
- ಒಮ್ಮೆಲೆ 1.20 ಲಕ್ಷ ಜನರು ರೈಲ್ವೆ ವೆಬ್ಸೈಟ್ ಪರೀಕ್ಷಿಸಿ, ಪ್ರತಿ ನಿಮಿಷಕ್ಕೆ 7,200 ಟಿಕೆಟ್ ಕಾಯ್ದಿರಿಸಬಹುದು. ಈ ಹಿಂದೆ ನಿಮಿಷಕ್ಕೆ 2 ಸಾವಿರ ಟಿಕೆಟ್ ಮಾತ್ರ ಕಾಯ್ದಿರಿಸಲು ಅವಕಾಶವಿತ್ತು.
- ಸ್ವಯಂಚಾಲಿತ ಟಿಕೆಟ್ ವಿತರಣಾ ವ್ಯವಸ್ಥೆ.
- ಪ್ಲಾಟ್ಫಾರ್ಮ್ ಹಾಗೂ ಕಾಯ್ದಿರಿಸಿದ ಟಿಕೆಟ್ ಕೂಡ ಆನ್ಲೈನ್ಲ್ಲಿ ಲಭ್ಯ.
-ಪಾರ್ಕಿಂಗ್ ಹಾಗೂ ಪ್ಲಾಟ್ಫಾರ್ಮ್ ಕಾಂಬೊ ಟಿಕೆಟ್ ಸೇವೆ.
- ಇಲಾಖೆಯ ಕಾರ್ಯವೈಖರಿ ಸಂಪೂರ್ಣ ಗಣಕೀಕೃತ
- ಮಾಹಿತಿ ತಂತ್ರಜ್ಞಾನದಿಂದ ಪಾರದರ್ಶಕ ವ್ಯವಸ್ಥೆ ಜಾರಿ.
- ಎ1 ಮತ್ತು ಎ ದರ್ಜೆಯ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ
- ರೈಲು ಸಂಚಾರದ ನಿಖರ ಮಾಹಿತಿ ಹಾಗೂ ಪ್ರಯಾಣಿಕರಿಗೆ ಜ್ಞಾಪಿಸುವ ವ್ಯವಸ್ಥೆ ಜಾರಿ.
- ಪ್ರಯಾಣ ಆರಂಭ ಹಾಗೂ ಅಂತ್ಯಕ್ಕೂ ಮುಂಚೆ ಪ್ರಯಾಣಿಕರನ್ನು ಎಚ್ಚರಿಸುವ ಸಂದೇಶ ರವಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement