ಗೌಡರ ನಿವಾಸದೆದುರು ಕೈ ದಾಂದಲೆ
ಗೌಡರ ನಿವಾಸದೆದುರು ಕೈ ದಾಂದಲೆ...
ನವದೆಹಲಿ: ರೈಲ್ವೆ ಅಭಿವೃದ್ಧಿಗೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರೈಲ್ವೆ ಸಚಿವ ಡಿ.ವಿ.ಸದಾನಂದಗೌಡರ ನಿವಾಸದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಗೌಡರ ನಿವಾಸದ ಕಾಂಪೌಂಡ್ನಲ್ಲಿದ್ದ ನೇಮ್ಪ್ಲೇಟ್ ಅನ್ನು ಕಿತ್ತು ನೆಲಕ್ಕೆ ಹಾಕಿ ಕಾಲಿನಿಂದ ತುಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಬಜೆಟ್ ಮಂಡಿಸಿ ನಿವಾಸಕ್ಕೆ ಮರಳಿದ ಸಚಿವರ ಕಾರನ್ನೂ ತಡೆಯಲು ಯತ್ನಿಸಿದರು. ರೈಲ್ವೆಯಲ್ಲಿ ಎಫ್ಡಿಐ ಮತ್ತು ದೇಶಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವುದು 'ಶ್ರೀಮಂತರ ಪರವಾದ ಕ್ರಮ' ಎಂದು ಟೀಕಿಸಿರುವ ಕಾಂಗ್ರೆಸ್, ತನ್ನ ಕಾರ್ಯಕರ್ತರ ವರ್ತನೆಯನ್ನೂ ವಿರೋಧಿಸಿದೆ. ರೈಲ್ವೆ ಸಚಿವರ ನೇಮ್ಪ್ಲೇಟ್ ಕಿತ್ತುಹಾಕಿದ್ದು ತಪ್ಪು' ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅರಿವಿಂದರ್ ಸಿಂಗ್ ಲವ್ಲಿ ಹೇಳಿದ್ದಾರೆ.