ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತಿಂಗಳಲ್ಲಿ ಶಾಸಕರ ಹೆಚ್ಚುವರಿ ಆಪ್ತ ಸಹಾಯಕರಿಗೆ ವೇತನ

ಶಾಸಕರ ಹೆಚ್ಚುವರಿ ಆಪ್ತ ಸಹಾಯಕರ ವೇತನ ಈ ತಿಂಗಳ ಒಳಗಾಗಿ ಬಿಡುಗಡೆಯಾಗಲಿದೆ ಎಂದು..

Rashmi Kasaragodu
Updated On : 9 Jul 2014, 1:15 am

ವಿಧಾನಪರಿಷತ್ತು: ಶಾಸಕರ ಹೆಚ್ಚುವರಿ ಆಪ್ತ ಸಹಾಯಕರ ವೇತನ ಈ ತಿಂಗಳ ಒಳಗಾಗಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕರು ಹೆಚ್ಚುವರಿಯಾಗಿ ನೇಮಿಸಿಕೊಂಡಿರುವ ಎರಡನೇ ಆಪ್ತ ಕಾರ್ಯದರ್ಶಿಗಳಿಗೆ 5 ತಿಂಗಳಿನಿಂದ ವೇತನ ನೀಡಿಲ್ಲ ಎಂದು ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ ಸದನದಲ್ಲಿ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈವರೆಗೂ 91 ಆಪ್ತ ಸಹಾಯಕರಿಗೆ ವೇತನ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ 32 ಸಹಾಯಕರಿಗೆ ವೇತನ ಬಿಡುಗಡೆ ಮಾಡಬೇಕಿದೆ. ಆದರೆ, ಅವರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಇಲಾಖೆಗೆ ನೀಡಿಲ್ಲ. ಹೀಗಾಗಿ ಅವರಿಗೆ ವೇತನ ಸಿಕ್ಕಿಲ್ಲ. ಆದ್ದರಿಂದ ಈ ತಿಂಗಳ ಒಳಗಾಗಿ ಎಲ್ಲರಿಗೂ ವೇತನ ಬಿಡುಗಡೆ ಮಾಡಿ ಸಮಸ್ಯೆ ಪರಿಹರಿಸಲಾಗುವುದು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement