ಪಿಪಿಪಿ ಅನಿವಾರ್ಯ
ಇವತ್ತಿನ ಸನ್ನಿವೇಶದಲ್ಲಿ ರೈಲ್ವೆ ತನ್ನ ಸ್ವಂತ ಸಂಪನ್ಮೂಲದಿಂದಲೇ ಗುರಿ ತಲುಪುವುದು ಕಷ್ಟ. ಮಂಜೂರಾದ ಯೋಜನೆಗಳಿಗೆ...
ಇವತ್ತಿನ ಸನ್ನಿವೇಶದಲ್ಲಿ ರೈಲ್ವೆ ತನ್ನ ಸ್ವಂತ ಸಂಪನ್ಮೂಲದಿಂದಲೇ ಗುರಿ ತಲುಪುವುದು ಕಷ್ಟ. ಮಂಜೂರಾದ ಯೋಜನೆಗಳಿಗೆ ಅನುದಾನ ಒದಗಿಸುವುದೇ ಸವಾಲು. ಅದಕ್ಕಾಗಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳಿಗೆ (ಪಿಪಿಪಿ) ಒತ್ತು ನೀಡಲಾಗುವುದು. ಅದರ ಅರ್ಥ ರೈಲ್ವೆಯನ್ನು ಖಾಸಗೀಕರಣ ಮಾಡಲಾಗುತ್ತದೆ ಎಂದಲ್ಲ. ಖಾಸಗಿಯವರ ಸಹಭಾಗಿತ್ವ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಾತ್ರ ಸೀಮಿತ.
ಟಿ ಪಿಪಿಪಿ ಯೋಜನೆಗಳನ್ನು ಸಂಬಂಧಿಸಿದ ವಲಯ ರೈಲ್ವೆಗಳೇ ಅಂತಿಮಗೊಳಿಸಲಿವೆ.
ಟಿ ಈಗಾಗಲೇ ಖಾಸಗಿ ಬಂಡವಾಳದೊಂದಿಗೆ ಕೆಲವು ವಿದ್ಯುತ್ ವಲಯದ ಯೋಜನೆಗಳು ಮತ್ತು ಬಂದರು ಸಂಪರ್ಕ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿನ 8 ಹೊಸ ಬಂದರುಗಳಿಗೆ ರೈಲ್ವೆಯು ಖಾಸಗಿ ಸಹಭಾಗಿತ್ವದಲ್ಲಿ ಸಂಪರ್ಕ ಕಲ್ಪಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆ ದೊರೆತಿದೆ. ಇವುಗಳ ಒಟ್ಟು ವೆಚ್ಚ ರು. 4,000 ಕೋಟಿ.
ಟಿ ರೈಲ್ವೆ ಹೊಂದಿರುವ ಭಾರಿ ಪ್ರಮಾಣದ ಭೂಮಿಯ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಅವುಗಳ ಸಮರ್ಪಕ ಬಳಕೆಗಾಗಿ ಜಿಐಎಸ್ ಆಧಾರಿತ ನಿರ್ವಹಣಾ ವ್ಯವಸ್ಥೆ ರೂಪಿಸಲಾಗುವುದು.
ಟಿ ರೈಲ್ವೆ ಜಾಗಗಳು ಲಭ್ಯ ಇರುವಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ರೈಲ್ವೆ ಸಂಬಂಧಿತ ಉದ್ದಿಮೆಗೆ ಉತ್ತೇಜನ ನೀಡಲಾಗುವುದು. ವಾಣಿಜ್ಯ ಚಟುವಟಿಕೆಗೂ ಉತ್ತೇಜನ ನೀಡಲಾಗುವುದು. ಇದರಿಂದ ರೈಲ್ವೆ ಜಾಗದ ರಕ್ಷಣೆಯೂ ಆಗುತ್ತದೆ, ಆದಾಯವೂ ಹರಿದು ಬರುತ್ತದೆ.
ಟಿ ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ನಿಲ್ದಾಣಗಳಲ್ಲಿನ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇನೆ. ರೈಲ್ವೆ ನಿಲ್ದಾಣಗಳಲ್ಲಿ ಫುಟ್-ಓವರ್ ಸೇತುವೆಗಳು, ಎಸ್ಕಲೇಟರ್ಗಳು ಹಾಗೂ ಲಿಫ್ಟ್ಗಳು, ನೀರು ಸರಬರಾಜು, ಪ್ಲಾಟ್ಫಾರಂ ಶೆಲ್ಟರ್ಗಳು ಹಾಗೂ ಶೌಚಾಲಯಗಳನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು.
ಟಿ ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿರುವ ಬ್ಯಾಟರಿ ಚಾಲಿತ ಗಾಡಿಗಳ ಸೇವೆಯನ್ನು ಪ್ಲಾಟ್ಫಾರಂಗಳ ನಡುವೆ ಸಂಚರಿಸುವ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಹಾಯಕ್ಕೂ ವಿಸ್ತರಿಸಲಾಗುವುದು.