ಪ್ರಧಾನಿ ಊರಿಗೆ ಮೊದಲ ಬುಲೆಟ್
ದೇಶದಲ್ಲಿ ಬುಲೆಟ್ ರೈಲು ಸಂಚಾರ ಪ್ರತಿ ಭಾರತೀಯನ ಕನಸು. ಬಹುದೀರ್ಘ ಕಾಲದ ...
ದೇಶದಲ್ಲಿ ಬುಲೆಟ್ ರೈಲು ಸಂಚಾರ ಪ್ರತಿ ಭಾರತೀಯನ ಕನಸು. ಬಹುದೀರ್ಘ ಕಾಲದ ಕನಸನ್ನು ನಮ್ಮ ಸರ್ಕಾರ ನನಸು ಮಾಡುತ್ತಿದೆ. ಮೊದಲ ಬುಲೆಟ್ ರೈಲು ಅಹಮದಾಬಾದ್-ಮುಂಬೈ ಮಾರ್ಗದಲ್ಲಿ ಸಂಚರಿಸಲಿದೆ. ಕಾರ್ಯಸಾಧ್ಯತೆ ಬಗ್ಗೆ ಈ ಮಾರ್ಗದಲ್ಲಿ ಹಲವಾರು ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಈ ಮಾರ್ಗದಲ್ಲಿ ಈಗ ಸಂಚರಿಸುತ್ತಿರುವ ಅತಿವೇಗದ ರೈಲು ಶತಾಬ್ದಿ ಎಕ್ಸ್ಪ್ರೆಸ್ ಆಗಿದ್ದು ಪ್ರಯಾಣ ಅವಧಿ 7 ಗಂಟೆ. ಪ್ರಸ್ತಾವಿತ ಬುಲೆಟ್ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸಲಿದೆ. ಬುಲೆಟ್ ರೈಲುಗಳಿಗೆ ಮೂಲಸೌಕರ್ಯಗಳನ್ನು ಸಂಪೂರ್ಣ ಹೊಸದಾಗಿ ಕಲ್ಪಿಸಬೇಕಾಗಿದೆ.
- ಮೆಟ್ರೋ ಮತ್ತು ಪ್ರಮುಖ ನಗರಗಳನ್ನು ಸಂಪರ್ಕಿಸುವ ವಜ್ರ ಚತುಷ್ಪಥ ಹೈಸ್ಪೀಡ್ ರೈಲು ಸಂಪರ್ಕ ನಮ್ಮ ಸರ್ಕಾರದ ಕನಸು. ಇದಕ್ಕಾಗಿ ಆರಂಭಿಕ ಹಂತದಲ್ಲಿ ರು. 100 ಕೋಟಿ ಮೀಸಲಿರಿಸಿದ್ದೇನೆ. ಯೋಜನೆಗೆ ಒಟ್ಟಾರೆ 9 ಲಕ್ಷ ಕೋಟಿ ರುಪಾಯಿ ಬೇಕಾಗಬಹುದು.
- ಪ್ರಯಾಣ ಅವಧಿ ಕಡಿಮೆ ಮಾಡಲು ಹಾಲಿ ರೈಲ್ವೆ ಜಾಲವನ್ನು ಮೇಲ್ದರ್ಜೆಗೆ ಏರಿಸಿ, ಆ ಮೂಲಕ ರೈಲುಗಳ ವೇಗವನ್ನು ಗಂಟೆಗೆ 160ರಿಂದ 200 ಕಿ.ಮೀ.ಗೆ ಏರಿಸುವ ಉದ್ದೇಶವಿದೆ. ಇದಕ್ಕಾಗಿ ನನ್ನ ಇಲಾಖೆ ಈ ಕೆಳಕಂಡ ಮಾರ್ಗಗಳನ್ನು ಗುರುತಿಸಿದೆ.
1. ದೆಹಲಿ- ಆಗ್ರಾ
2. ದೆಹಲಿ- ಚಂಡೀಗಡ
3. ದೆಹಲಿ- ಕಾನ್ಪುರ
4. ನಾಗ್ಪುರ- ಬಿಲಾಸ್ಪುರ
5. ಮೈಸೂರು- ಬೆಂಗಳೂರು- ಚೆನ್ನೈ
6. ಮುಂಬೈ- ಗೋವಾ
7. ಮುಂಬೈ- ಅಹಮದಾಬಾದ್
8. ಚೆನ್ನೈ- ಹೈದರಾಬಾದ್
9. ನಾಗ್ಪುರ- ಸಿಕಂದರಾಬಾದ್