ಬೋಗಿ, ಭೋಗಿಯಲ್ಲೂ ಸದಾನಂದ
ರೈಲುಗಳಲ್ಲಿರುವ ಮಹಿಳಾ ಬೋಗಿಗಳಿಗೆ ಮಹಿಳಾ ಆರ್‌ಪಿಎಫ್ (ರೈಲ್ವೆ ಸುರಕ್ಷತಾ ಪಡೆ) ಕಾನ್‌ಸ್ಟೇಬಲ್‌ಗಳ ..
ರೈಲಲ್ಲಿ ಇರುತ್ತಾರೆ ಮಹಿಳಾ ಕಾನ್‌ಸ್ಟೇಬಲ್
ರೈಲುಗಳಲ್ಲಿರುವ ಮಹಿಳಾ ಬೋಗಿಗಳಿಗೆ ಮಹಿಳಾ ಆರ್‌ಪಿಎಫ್ (ರೈಲ್ವೆ ಸುರಕ್ಷತಾ ಪಡೆ) ಕಾನ್‌ಸ್ಟೇಬಲ್‌ಗಳ ನೇಮಕ; ಇದಕ್ಕಾಗಿ ಮೊದಲು 4 ಸಾವಿರ ಮಹಿಳಾ ಕಾನ್‌ಸ್ಟೇಬಲ್‌ಗಳ ನಿಯೋಜನೆ. ಮಹಿಳೆಯರ ಸುರಕ್ಷತೆಗಾಗಿ ಸರ್ಕಾರದಿಂದ ಈ ಕ್ರಮ. ಇಷ್ಟೇ ಅಲ್ಲದೆ, ಪ್ರಮುಖ ನಿಲ್ದಾಣಗಳಲ್ಲಿ ವಿಕಲಾಂಗ ಮತ್ತು ಹಿರಿಯ ನಾಗರಿಕರಿಗೆ ಬ್ಯಾಟರಿ ಚಾಲಿತ ಕಾರಿನ ಸೌಲಭ್ಯ. ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ವ್ಯವಸ್ಥೆ.
ಸುರಕ್ಷತೆ ಹಾಗೂ ನೈರ್ಮಲ್ಯಕ್ಕಾಗಿ ಸರ್ಕಾರ ಸಾವಿರಾರು ಹೊಸ ಯೋಜನೆಗಳನ್ನು ಘೋಷಿಸಿದರೂ ನಾವು -ನೀವು ಬದಲಾಗದ ಹೊರತು ಏನೂ ಮಾಡಲು ಸಾಧ್ಯವಿಲ್ಲ.
- ವಿವೇಕ್ ಅರೋರಾ
ಇದು ಗುಜರಾತ್, ಕರ್ನಾಟಕ, ಮಹಾರಾಷ್ಟ್ರಕ್ಕಾಗಿ ಮಂಡಿಸಿದ ರೈಲ್ವೆ ಬಜೆಟ್. ಬಿಜೆಪಿಗೆ ಮತ ಹಾಕಲಿಲ್ಲವೆಂದು ಕೇರಳ, ತಮಿಳುನಾಡು, ಪ.ಬಂಗಾಳ, ಒಡಿಶಾ ಜನತೆಗೆ ಅನ್ಯಾಯ ಮಾಡಲಾಗಿದೆ.
-ಮುರುಗೇಶ್ ರಾಮಯ್ಯ
58 -ಈ ಬಾರಿ ಘೋಷಿಸಲಾದ ಹೊಸ ರೈಲುಗಳು. 11 ರೈಲುಗಳ ಸಂಚಾರ ವಿಸ್ತರಣೆ
09 ಲಕ್ಷ ಕೋಟಿ -ವಜ್ರ ಚತುಷ್ಪಥ ಯೋಜನೆಗೆ ಬೇಕಾದ ಅಂದಾಜು ವೆಚ್ಚ. ಹೈಸ್ಪೀಡ್ ರೈಲುಗಳಿಗಾಗಿ ಈ ಯೋಜನೆ
ಹಳಿತಪ್ಪಿದ ರೈಲನ್ನು ಟ್ರ್ಯಾಕಿಗೆ ತರುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಕಾರ್ಯಸಾಧ್ಯವಲ್ಲದ ಯೋಜನೆ ಘೋಷಿಸಿ ಚಪ್ಪಾಳೆ ತಟ್ಟಿಸಿಕೊಳ್ಳುವ ಆಸೆ ನನಗಿಲ್ಲ. ಅದಕ್ಕಾಗಿ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ.
ಹಾಗೆ ಮಾಡಿದರೆ ನಾನು ಜನತೆಗೆ, ರೈಲ್ವೆಗೆ ಮೋಸ ಮಾಡಿದಂತಾಗುತ್ತದೆ. ಜಾರಿಯಲ್ಲಿರುವ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸಿದ್ದೇನೆ.
-ಸದಾನಂದಗೌಡ, ರೇಲ್ವೆ ಸಚಿವ
ನಿಮಿಷಕ್ಕೆ 7,200 ಟಿಕೆಟ್!
- ಆನ್‌ಲೈನ್ ಬುಕಿಂಗ್ ಮಾಡುವ ವೇಳೆ ನಿಮಿಷಕ್ಕೆ 7,200 ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ. ಏಕಕಾಲಕ್ಕೆ 1.2 ಲಕ್ಷ ಬಳಕೆದಾರರು ಇದಕ್ಕೆ ಲಾಗ್‌ಇನ್ ಆಗುವ ಅವಕಾಶ.
- ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆ ಪರಿಷ್ಕರಣೆ, ಅಂಚೆ ಕಚೇರಿ ಮತ್ತು ಮೊಬೈಲ್ ಮೂಲಕವೂ ಟಿಕೆಟ್ ಬುಕಿಂಗ್ ವ್ಯವಸ್ಥೆಗೆ ಒತ್ತು. ಆನ್‌ಲೈನ್‌ನಲ್ಲೇ ಪ್ಲಾಟ್‌ಫಾರಂ, ಕಾಯ್ದಿರಿಸದ ಟಿಕೆಟ್ ಪಡೆಯುವ ವ್ಯವಸ್ಥೆ
-ಸರ್ಕಾರಿ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಪ್ರಮುಖ ರೈಲು ನಿಲ್ದಾಣಗಳು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಕೆ.
-ಎಸ್‌ಎಂಎಸ್, ದೂರವಾಣಿ, ಮಿಂಚಂಚೆ ಹಾಗೂ ಮೊಬೈಲ್ ಆ್ಯಪ್ ಮೂಲಕ ಆಹಾರಕ್ಕೆ ಆರ್ಡರ್ ಮಾಡುವ ವ್ಯವಸ್ಥೆ; ಪ್ರಮುಖ ರೈಲು ನಿಲ್ದಾಣಗಳಲ್ಲಿ ಫುಡ್‌ಕೋರ್ಟ್ ಸ್ಥಾಪನೆ
- ರೈಲುಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯಲು ಐವಿಆರ್‌ಎಸ್ ಸೇವೆ.
- ಗಂಟೆಗೆ 160-200 ಕಿ.ಮೀ.ವರೆಗೆ ರೈಲಿನ ವೇಗ ಹೆಚ್ಚಳ. ಮುಂಬೈ-ಅಹಮದಾಬಾದ್ ವಲಯಕ್ಕೆ ಬುಲೆಟ್ ರೈಲು
ರೈಲ್ವೆ ಸ್ವಚ್ಛತೆಯೇ ನಮ್ಮ ಆದ್ಯತೆ
ರೈಲುಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ. ನೈರ್ಮಲ್ಯದ ಮೇಲೆ ನಿಗಾ ಇಡಲು ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ. ಪ್ರಮುಖ ನಿಲ್ದಾಣಗಳಲ್ಲಿ ಸೌರಶಕ್ತಿ ಬಳಕೆ. ಹೊಸ ಮತ್ತು ನವೀಕರಿಸಲಾಗುವ ಇಂಧನ ಸಚಿವಾಲಯದಿಂದ ಶೇ.40 ಸಬ್ಸಿಡಿ ನೆರವಿನಿಂದ ಸೌರವಿದ್ಯುತ್ ಸ್ಥಾವರ ಸ್ಥಾಪನೆ
ವಿದೇಶಿ ನೇರ ಬಂಡವಾಳಕ್ಕೂ ಸೈ
ರೈಲ್ವೆ ಯೋಜನೆಗಳಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ. ರೈಲ್ವೆ ಮೂಲಸೌಕರ್ಯ ಯೋಜನೆಗಳಲ್ಲಿ ಎಫ್‌ಡಿಐ ಮತ್ತು ಸ್ಥಳೀಯ ಹೂಡಿಕೆಗೆ ಅವಕಾಶ. ವಿಶ್ವದರ್ಜೆಯ ರೈಲ್ವೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ.
ರಾಜ್ಯದ 4 ಸೇರಿ ದಂತೆ ದೇಶಾದ್ಯಂತ18 ಹೊಸ ಮಾರ್ಗಗಳು ಹಾಗೂ ರಾಜ್ಯದ 1 ಸೇರಿ 10 ದ್ವಿಪಥ ಮಾರ್ಗಗಳಿಗಾಗಿ ಸಮೀಕ್ಷೆ
ಪ್ರಯಾಣಿಕರ ಅನುಕೂಲಕ್ಕೆ
ಪ್ರಯಾಣ ದರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ
ಪ್ರಮುಖ ಮತ್ತು ಉಪನಗರ ಬೋಗಿಗಳಲ್ಲಿ ಆಟೋಮ್ಯಾಟಿಕ್ ಆಗಿ ಬಾಗಿಲು ಮುಚ್ಚುವ ವ್ಯವಸ್ಥೆ
ಪಾರ್ಕಿಂಗ್-ಪ್ಲಾಟ್‌ಫಾರಂಗೆ ಕೋಂಬೋ ಟಿಕೆಟ್ ವ್ಯವಸ್ಥೆ
ತಾಂತ್ರಿಕ ಮತ್ತು ತಾಂತ್ರಿಕೇತರ ವಿಚಾರಗಳನ್ನು ಕಲಿಸುವ ರೈಲು ವಿಶ್ವವಿದ್ಯಾಲಯ ಸ್ಥಾಪನೆ
ಎಷ್ಟೆಷ್ಟು?
ಯೋಜನೆ ಅಂದಾಜು ವೆಚ್ಚ - 64,305 ಕೋಟಿ
ರೈಲ್ವೆ ವೆಚ್ಚದ ಅಂದಾಜು - ರು. 1,49,176 ಕೋಟಿ
ಆಫೀಸ್-ಆನ್-ವೀಲ್ಸ್: ಆಯ್ದ ರೈಲುಗಳಲ್ಲಿ ಇಂಟರ್ನೆಟ್ ಮತ್ತು ವರ್ಕ್‌ಸ್ಟೇಷನ್ ಸೌಲಭ್ಯಗಳು. ರೈಲುಗಳಲ್ಲೇ ಕುಳಿತು ಕಚೇರಿಯ ಕೆಲಸಗಳನ್ನು ಮಾಡುವ, ಅಂತರ್ಜಾಲದಲ್ಲಿ ಜಾಲಾಡುವ ಸೌಲಭ್ಯ. ಆಯ್ದ ರೈಲುಗಳು ಮತ್ತು ಎ-1, ಎ ವರ್ಗದ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ.
ಪೈಸೆ ಹೇಗೆ ಬರುತ್ತದೆ; ಹೇಗೆ ಹೋಗುತ್ತದೆ?
1. ಸರಕು ಸಾಗಣೆ 67 ಪೈಸೆ
2. ಪ್ರಯಾಣಿಕರ ಟಿಕೆಟ್ 25 ಪೈಸೆ
3. ಇತರ ಮೂಲ 3 ಪೈಸೆ
4. ಸಣ್ಣಪುಟ್ಟ ಮೂಲಗಳು 3 ಪೈಸೆ
5. ಇತರ 2 ಪೈಸೆ
1. ನೌಕರರ ಸಂಬಳ, ಭತ್ಯೆ 34 ಪೈಸೆ
2. ಇಂಧನ 18 ಪೈಸೆ
3. ಉಗ್ರಾಣ 3 ಪೈಸೆ
4. ಸವಕಳಿ ಮೀಸಲು ನಿಧಿ 5 ಪೈಸೆ
5. ಪಿಂಚಣಿ ನಿಧಿ 17 ಪೈಸೆ
6. ಭೋಗ್ಯ ಶುಲ್ಕ 4 ಪೈಸೆ
7. ಡಿವಿಡೆಂಡ್ 4 ಪೈಸೆ
8. ಅಧಿಕೃತ ಬಂಡವಾಳ 1 ಪೈಸೆ
9. ಅಭಿವೃದ್ಧಿ ನಿಧಿ 6 ಪೈಸೆ
10. ಇತರೆ 8 ಪೈಸೆ