ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸದಾ ಸೀದಾ ರೈಲು

ಕರ್ನಾಟಕಕ್ಕೆ ಈ ಸಾಲಿನಲ್ಲಿ ರೈಲುಗಳ ಸುಗ್ಗಿ! ಅದಕ್ಕೆ ಕಾರಣ ಕೊಡುಗೈ ದಾನಿ ಸದಾನಂದಗೌಡರು!...

Rashmi Kasaragodu
Updated On : 9 Jul 2014, 1:22 am

ನವದೆಹಲಿ: ಕರ್ನಾಟಕಕ್ಕೆ ಈ ಸಾಲಿನಲ್ಲಿ ರೈಲುಗಳ ಸುಗ್ಗಿ! ಅದಕ್ಕೆ ಕಾರಣ ಕೊಡುಗೈ ದಾನಿ ಸದಾನಂದಗೌಡರು!
ತಮ್ಮ ಚೊಚ್ಚಲ ಬಜೆಟ್‌ನಲ್ಲಿ ತವರು ಪ್ರೀತಿ ಮೆರೆದಿದ್ದಾರೆ. ಮಿತಿ ಮೀರಿ ರಾಜ್ಯಕ್ಕೆ ಉದಾರತೆ ತೋರಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಅವರು ರೈಲು ಬಜೆಟ್ ಅನ್ನು ರಾಜಕೀಯದಿಂದ ದೂರ ಇಟ್ಟಿದ್ದಾರೆ. ಹೀಗಾಗಿ ಮಧ್ಯಂತರ ಬಜೆಟ್‌ನಲ್ಲಿ ಆಗಿನ ರೈಲು ಸಚಿವ ಮಲ್ಲಿಕಾರ್ಜುನ ಖರ್ಗೆ ನೀಡಿದ ಕೊಡುಗೆಗಳ ಜತೆಗೆ ತಮ್ಮ ಕೊಡುಗೆಯನ್ನೂ ಜೋಡಿಸಿದ್ದಾರೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕಕ್ಕೆ ರೈಲುಗಳ ಸುಗ್ಗಿ!
5 ಹೊಸ ಮಾರ್ಗಗಳಿಗೆ ಸಮೀಕ್ಷೆ, ಜೋಡಿ ಮಾರ್ಗ, ಒಂದು ಪ್ರೀಮಿಯಂ, 4 ಎಕ್ಸ್‌ಪ್ರೆಸ್, 3 ಪ್ಯಾಸೆಂಜರ್, ಬೆಂಗಳೂರಿನಲ್ಲಿ ಪ್ರಯಾಣಿಕರ ಸಂದಣಿ ತಗ್ಗಿಸಲು 3 ಮಾರ್ಗದಲ್ಲಿ ವೇಮು ಮತ್ತು ಡೇಮು ಸೇವೆ. ಮೇಲ್ನೋಟಕ್ಕೆ ಕಡಮೆ ಎನಿಸಿದರೂ, ಯಾವುದೇ ಹೊಸ ಯೋಜನೆ ಘೋಷಿಸದೇ ಸಿದ್ಧಪಡಿಸಿರುವ ಬಜೆಟ್‌ನಲ್ಲಿ ರಾಜ್ಯಕ್ಕಿಷ್ಟು ದಕ್ಕಿಸಿರುವುದೇ ಹೆಚ್ಚುಗಾರಿಕೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿರುವ 4 ಪ್ರೀಮಿಯಂ, 5 ಎಕ್ಸ್‌ಪ್ರೆಸ್, ಒಂದು ಫಾಸ್ಟ್ ಪ್ಯಾಸೆಂಜರ್ ರೈಲು ಜತೆಗೆ ಹಾಲಿ ಸಂಚರಿಸುತ್ತಿರುವ 3 ರೈಲುಗಳ ಸಂಚಾರ ಸಾಂದ್ರತೆ ಹೆಚ್ಚಳ ಇವೆಲ್ಲವೂ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ದಕ್ಕಿವೆ.



ಎಕ್ಸ್ ಪ್ರೆಸ್  ರೈಲುಗಳು
ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ (ಬಂಗಾರ ಪೇಟೆ- ಜೋಲಾರ ಪೇಟೆ ಮಾರ್ಗ, ನಿತ್ಯ)
ಹೌರಾ - ಯಶವಂತಪುರ ಎಸಿ ಎಕ್ಸ್‌ಪ್ರೆಸ್ (ಭುವನೇಶ್ವರ್- ಗುಡೂರ್- ಕಟ್ಪಾಡಿ ಮಾರ್ಗ- ವಾರಕ್ಕೊಮ್ಮೆ)
ಹುಬ್ಬಳ್ಳಿ- ಮುಂಬೈ ಎಕ್ಸ್‌ಪ್ರೆಸ್ ( ಬಿಜಾಪುರ- ಶೋಲಾಪುರ ಮಾರ್ಗ- ವಾರಕ್ಕೊಮ್ಮೆ)
ಹೈದರಾಬಾದ್- ಗುಲ್ಬರ್ಗಾ  ಇಂಟರ್ ಸಿಟಿ  (ನಿತ್ಯ)
ವಾರಣಾಸಿ- ಮೈಸೂರು ಎಕ್ಪ್ರ್ಸೆಸ್  (ವಾಡಿ-ದೌಂಡ್ ಮಾರ್ಗ- ವಾರಕ್ಕೆರಡು ದಿನ)


ಹಳಿ ದ್ವಿಗುಣ


-  ಮಂಗಳೂರು- ಉಳ್ಳಾಲ- ಸುರತ್ಕಲ್
ಹೊಸ ಸಮೀಕ್ಷೆ
-  ಕಾಞಂಗಾಡ್- ಪಾಣತ್ತೂರು ಕಾಣಿಯೂರು
-   ಗಬ್ಬೂರು- ಬಳ್ಳಾರಿ
-  ಶಿವಮೊಗ್ಗ- ಶೃಂಗೇರಿ- ಮಂಗಳೂರು
-   ತಾಳಗುಪ್ಪ- ಸಿದ್ಧಾಪುರ,
-  ಗದಗ- ಹರಪನಹಳ್ಳ್ಙಿ

ಪ್ರೀಮಿಯಂ ರೈಲು
-  ಕಾಮಕ್ಯ- ಬೆಂಗಳೂರು ಪ್ರೀಮಿಯಂ ಎಕ್ಸ್‌ಪ್ರೆಸ್



ಎಕ್ಸ್‌ಪ್ರೆಸ್ ರೈಲುಗಳು
-  ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ (ನಿತ್ಯ)
-  ಬೆಂಗಳೂರು- ಶಿವಮೊಗ್ಗ ಎಕ್ಸ್‌ಪ್ರೆಸ್ (ವಾರಕ್ಕೆ 2 ದಿನ)
-  ಟಾಟಾ ನಗರ- ಬೈಯ್ಯಪ್ಪನಹಳ್ಳಿ (ವಾರಕ್ಕೊಮ್ಮೆ)
- ಬೀದರ್- ಮುಂಬೈ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)


ಪ್ಯಾಸೆಂಜರ್ ರೈಲು
- ಧಾರವಾಡ- ಆಳ್ನಾವರ- ದಾಂಡೇಲಿ(ನಿತ್ಯ)
-  ಬೈಂದೂರು- ಕಾಸರಗೊಡು(ನಿತ್ಯ)
-  ಯಶವಂತಪುರ- ತುಮಕೂರು(ನಿತ್ಯ)


ವೆಮು ರೈಲು

ಬೆಂಗಳೂರು - ರಾಮನಗರ (ವಾರಕ್ಕೆ 6 ದಿನ)


ಡೆಮು ರೈಲು


ಬೆಂಗಳೂರು- ನೆಲಮಂಗಲ (ವಾರಕ್ಕೆ 6 ದಿನ)
ಯಶವಂತಪುರ- ಹೊಸೂರು (ವಾರಕ್ಕೆ 6 ದಿನ)  


ಪ್ಯಾಸೆಂಜರ್ ರೈಲು
-  ಹುಬ್ಬಳ್ಳಿ-ಬೆಳಗಾವಿ  ಫಾಸ್ಟ್ (ನಿತ್ಯ)
-  ಸಂಚಾರ ಸಾಂದ್ರತೆ ಹೆಚ್ಚಳ (ವಾರಕ್ಕೆ ಮೂರು ದಿನದಿಂದ ನಿತ್ಯ)
-  ಬೀದರ್- ಯಶವಂತಪುರ ಎಕ್ಸ್‌ಪ್ರೆಸ್ (ನಿತ್ಯ)
- ವಿಜಯವಾಡ-ಹುಬ್ಬಳ್ಳಿ ಎಕ್ಸ್‌ಪ್ರೆಸ್(ನಿತ್ಯ)
-  ಹುಬ್ಬಳ್ಳಿ- ಸಿಕಂದರಾಬಾದ್ ಎಕ್ಸ್‌ಪ್ರೆಸ್ (ನಿತ್ಯ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement