ಅಪರಾಧಕ್ಕೆ ವಯಸ್ಸು ಮಾನದಂಡ ಅಲ್ಲ
ಅತ್ಯಾಚಾರ, ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ಬಾಲಾಪರಾಧಿಗಳಿಗೆ...
ನವದೆಹಲಿ: ಅತ್ಯಾಚಾರ, ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ಬಾಲಾಪರಾಧಿಗಳಿಗೆ ಶಿಕ್ಷೆಯಲ್ಲಿ ಸಂಪೂರ್ಣ ವಿನಾಯಿತಿ ಏಕೆ?
ಇದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿರುವ ಪ್ರಶ್ನೆ. ಘೋರ ಅಪರಾಧಗಳಲ್ಲಿ ಭಾಗಿಯಾದ 16-18ರೊಳಗಿನ ಮಕ್ಕಳ ಸಂಖ್ಯೆ ಕಳೆದ ದಶಕದಲ್ಲಿ ಶೇ.65ರಷ್ಟು ಹೆಚ್ಚಳವಾಗಿದೆ ಎಂದು ಸರ್ಕಾರದ ಅಂಕಿಅಂಶಗಳೇ ಹೇಳುತ್ತಿವೆ. ಸರ್ಕಾರಿ ಉದ್ಯೋಗಕ್ಕೆ ಇರುವಂತೆ ಅಪರಾಧದಲ್ಲಿ ವಯಸ್ಸನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಬಾಲ ನ್ಯಾಯ ಕಾಯ್ದೆಯನ್ನು ಮರುಪರಿಶೀಲಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ ಎಂದು ಹೇಳಿದೆ.
ನಿಯಮವಾದರೂ ಬದಲಿಸಿ: ಶಾಲಾ ಸರ್ಟಿಫಿಕೆಟ್ ಆಧಾರದಲ್ಲಿ ಅಪರಾಧಿಯೊಬ್ಬನನ್ನು ಬಾಲಕ ಎಂದು ತೀರ್ಪು ನೀಡಿದ ಕೋಲ್ಕತ್ತಾ ಹೈಕೋರ್ಟ್ನ ನಿರ್ಧಾರ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಪೀಠ, 18 ವರ್ಷ ತುಂಬಿದೊಡನೆ ಸರ್ಕಾರ ಮತದಾನದ ಹಕ್ಕು ನೀಡುತ್ತದೆ. ಯಾವ ಸರ್ಕಾರ ಆಡಳಿತ ನಡೆಸಬೇಕು ಎಂದು ಆಯ್ಕೆ ಮಾಡುವಷ್ಟು ಪ್ರೌಢಿಮೆ ಆ ಯುವಕ ಅಥವಾ ಯುವತಿಗೆ ಇರುತ್ತದೆ ಎಂದಾದರೆ ಶಿಕ್ಷೆಯ ವಿಚಾರಕ್ಕೆ ಬಂದಾಗ ಮಾತ್ರ ಅವರನ್ನು ಬಾಲರು ಎಂದೇಕೆ ಪರಿಗಣಿಸಬೇಕು ಎಂದು ಪ್ರಶ್ನಿಸಿದೆ. ಜತೆಗೆ, ಸರ್ಕಾರವು ಸರ್ಕಾರವೇ ಬಾಲನ್ಯಾಯ ಕಾಯ್ದೆಯನ್ನು ಮರುಪರಿಶೀಲಿಸಬೇಕು ಎಂದಿದೆ.