ಆಗುಂಬೆ ಘಾಟಿ ಕುಸಿತ
ಶ್ರೀಕಾಂತ ಭಟ್
ಆಗುಂಬೆ: ಘಟ್ಟದ ಊರುಗಳ ಪ್ರಮುಖ ಸಂಪರ್ಕ ಮಾರ್ಗ ಆಗುಂಬೆ ಘಾಟಿ ಶಿಥಿಲಗೊಳ್ಳುತ್ತಿದ್ದು, ಎಚ್ಚರಿಕೆ ನೀಡುತ್ತ್ತಿದೆ.
ವಾರದಿಂದ ಭರ್ಜರಿ ಮಳೆ ಸುರಿಯುತ್ತಿದ್ದು, ಪದೇ ಪದೇ ಭೂ ಕುಸಿತವಾಗುತ್ತಲಿದೆ. ಘಾಟಿಯ ಹದಿನಾಲ್ಕೂ ಸುತ್ತುಗಳ ಅಲ್ಲಲ್ಲಿ ಕುಸಿತ ಸಂಭವಿಸಿದೆ. 5ಕ್ಕೂ ಹೆಚ್ಚು ಕಡೆ ಸಣ್ಣ ಪ್ರಮಾಣದಲ್ಲಿ ಘಾಸಿಯಾಗಿದೆ ಇದಲ್ಲದೆ, 11ನೇ ತಿರುವಿನಲ್ಲಿ ಭಾರೀ ಕುಸಿತ ಕಂಡಿದ್ದು, ನಿರಂತರ ಮಣ್ಣು ಉದುರುತ್ತಿದೆ. 9ನೇ ತಿರುವಿನಲ್ಲೂ ಇದೇ ಸ್ಥಿತಿ ಇದ್ದು, ವಾಹನಗಳು ನಿಧಾನವಾಗಿ ಚಲಿಸುವಂತೆ ಬೋರ್ಡ್ ಹಾಕಿ ಸರ್ಕೀರ ಕೈ ತೊಳಕೊಂಡಿದೆ.
ಬಹು ಮುಖ್ಯ: ಮಲೆನಾಡು, ಕರಾವಳಿ, ಬಯಲು ಸೀಮೆ ಭಾಗದ ಪ್ರಮುಖ ಸಂಪರ್ಕವೇ ಈ ಘಾಟಿ ರಸ್ತೆ. ಮಣಿಪಾಲ ಆಸ್ಪತ್ರೆಗೆ ಸಂಚರಿಸುವವರು ಅನುಸರಿಸುವುದು ಇದೇ ಮಾರ್ಗ. ನಿತ್ಯ ಕನಿಷ್ಠವೆಂದರೂ 30ಕ್ಕೂ ಹೆಚ್ಚು ಆ್ಯಂಬುಲೆನ್ಸ್ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ.
ವಸ್ತುಸ್ಥಿತಿ: ಬಹುತೇಕ ಎಲ್ಲ ಕಡೆ ತಡೆಗೋಡೆಗಳೂ ಶಿಥಿಲಗೊಂಡು, ಅಲ್ಲಲ್ಲಿ ಕೆಳಕ್ಕುರುಳಿವೆ. ಒಂದು ಹೇರ್ಪಿನ್ ತಿರುವಿನಲ್ಲೂ ತಡೆಗೋಡೆ ಕುಸಿದಿದೆ. ಶಿವಮೊಗ್ಗ ವ್ಯಾಪ್ತಿಯ ರಸ್ತೆಗಳಂತೂ ಸುಸ್ಥಿತಿಯಲ್ಲಿಲ್ಲ. ನಿರ್ವಹಣೆ ಇಲ್ಲದೇ ಕಾಂಕ್ರಿಟ್ ರಸ್ತೆಗಳು ಕಿತ್ತುಹೋಗಿವೆ. ವಾರದ ಹಿಂದೆ ಮಣ್ಣು ಕುಸಿದು ಕಾರೊಂದಕ್ಕೆ ಬಡಿದಿದ್ದು, ಅದೃಷ್ಟವಶಾತ್ ಪ್ರಾಣ ಹಾನಿ ಆಗಿರಲಿಲ್ಲ.
30 ವರ್ಷದ ಕೂಗು: ಆಗುಂಬೆ ಘಾಟಿಗೆ ಕಾಯಕಲ್ಪ ಮೂರು ದಶಕದ ಬೇಡಿಕೆ. ಆದರೆ, ಸರ್ಕಾರ ಮೌನ ವಹಿಸಿದೆ.