ರಾಘವೇಂದ್ರ ಸ್ವಾಮಿ, ಸಾಯಿಬಾಬಾ ದೇವರಲ್ಲ
ಮಂತ್ರಾಲಯ ರಾಘವೇಂದ್ರ ಸ್ವಾಮಿಗಳು ದೇವರಲ್ಲ, ಅದೇ ರೀತಿ ಸಾಯಿ ಬಾಬಾ...
ಮಂಗಳೂರು: ಮಂತ್ರಾಲಯ ರಾಘವೇಂದ್ರ ಸ್ವಾಮಿಗಳು ದೇವರಲ್ಲ, ಅದೇ ರೀತಿ ಸಾಯಿ ಬಾಬಾ ಕೂಡಾ ದೇವರಲ್ಲ, ಅವರು ಸಂತರು ಮಾತ್ರ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಕಲ್ಕೂರ ಪ್ರತಿಷ್ಠಾನ ವತಿಯಿಂದ ಕದ್ರಿ ಮಂಜುಪ್ರಸಾದದಲ್ಲಿ ತುಲಭಾರ ಸಮಾರಂಭಕ್ಕೆ ಮುನ್ನ ಸುದ್ದಿಗಾರರ ಜತೆ ಮಾತನಾಡಿ, ಸ್ವಾಮಿಗಳನ್ನು ದೇವರ ರೀತಿ ನೋಡಲಾಗದು, ಆದರೆ ಅವರ ಮೇಲೆ ಅಪಾರ ಗೌರವ ಇದೆ. ದೇವರೆಂದರೆ ನಾವು ಆರಾಧಿಸುವ ಶ್ರೀರಾಮ, ಕೃಷ್ಣ, ಮಹೇಶ್ವರ ಮೊದಲಾದವರು. ನಾವೆಲ್ಲ ದೇವರಾಗುವುದಿಲ್ಲ ಎಂದರು. ಗಂಗಾ ಶುದ್ಧೀಕರಣ ಕುರಿತು ಸಾಧು, ಸಂತರ ಅಭಿಪ್ರಾಯವನ್ನು ಕ್ರೋಡೀಕರಿಸಿ ಪ್ರಧಾನಿ ನರೇಂದ್ರ ಮೋದಿಗೆ ನೀಡಲಾಗಿದೆ ಎಂದರು.