ನಾಮ ನಿರ್ದೇಶನಗೊಂಡ ಸದಸ್ಯರಿಗೆ 'ಹೈ' ನೋಟಿಸ್
ಬೆಂಗಳೂರು: ಇತ್ತೀಚೆಗೆ ನಾಮ ನಿರ್ದೇಶನಗೊಂಡ ವಿಧಾನಪರಿಷತ್‌ನ ಐವರು ಸದಸ್ಯರಿಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ತುರ್ತು ನೋಟಿಸ್ ಜಾರಿ ಮಾಡಿದೆ. ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಸಂಬಂಧಿಸಿ ಪರಿಚ್ಛೇದ 171(5) ಪ್ರಕಾರ ಸಾಹಿತ್ಯ, ಕಲೆ, ವಿಜ್ಞಾನ ಹಾಗೂ ಸಮಾಜಸೇವೆಯಲ್ಲಿ ತೊಡಗಿದವರ ಹೆಸರನ್ನು ನಾಮನಿರ್ದೇಶನ ಮಾಡಬೇಕು. ಆದರೆ ರಾಜಕೀಯ ಹಿನ್ನೆಲೆಯುಳ್ಳ ಕಾಂಗ್ರೆಸ್ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಕೆಜಿಎಫ್‌ನ ಮಾಜಿ ಶಾಸಕ ಎಸ್.ರಾಜೇಂದ್ರನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಶೋಕ್ ಬಿ ಹಿಂಚಿಗೇರಿ ಅವರ ಪೀಠ, ವಿ.ಎಸ್. ಉಗ್ರಪ್ಪ, ಅಬ್ದುಲ್ ಜಬ್ಬರ್, ಐವಾನ್ ಡಿಸೋಜಾ, ಇಕ್ಬಾಲ್ ಅಹಮದ್ ಸರದಗಿ, ಡಾ.ಜಯಮಾಲರಿಗೆ ತುರ್ತು ನೋಟಿಸ್ ಜಾರಿ ಮಾಡಿ, ರಾಜ್ಯಪಾಲರ ಕಚೇರಿ ಹಾಗೂ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.