ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಲ್ಲಿದ್ದಲು ಹಗರಣ ವಿಶೇಷ ಕೋರ್ಟ್

ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ವಿಚಾರಣೆಗೆ ವಿಶೇಷ ಕೋರ್ಟ್ ರಚಿಸಲು ಸುಪ್ರೀಂ ಕೋರ್ಟ್...

Vishwanath S
Updated On : 19 Jul 2014, 2:02 am

ನವದೆಹಲಿ: ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ವಿಚಾರಣೆಗೆ ವಿಶೇಷ ಕೋರ್ಟ್ ರಚಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಜತೆಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ ಪ್ರಕರಣಗಳ ವಿಚಾರಣೆಗೆ ನ್ಯಾಯಾಧೀಶರ ನೇಮಕಕ್ಕೂ ದೆಹಲಿ ಹೈಕೋರ್ಟ್‌ಗೆ ಸೂಚಿಸಿದೆ.
ವಾರದೊಳಗೆ ವಿಶೇಷ ಸರ್ಕಾರಿ ವಕೀಲನನ್ನು ನೇಮಿಸ ಬೇಕೆದು ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾರನ್ನೊಳಗೊಂಡ ಪೀಠ ಸೂಚಿಸಿತು. ಜತೆಗೆ, ಈ ಹೊಣೆಯನ್ನು ಹಿರಿಯ ವಕೀಲ ಗೋಪಾಲ ಸುಬ್ರಮಣಿಯಮ್ ಅವರಿಗೆ ವಹಿಸಲು ಸಿಜೆಐ ಸೇರಿದಂತೆ ಹೆಚ್ಚಿನವರು ಆಸಕ್ತಿ ವಹಿಸಿದ್ದೂ ಕಂಡುಬಂತು. ಕಳಂಕವಿರದ, ಪ್ರಾಮಾಣಿಕ ಹಾಗೂ ಉತ್ತಮ ಕಾನೂನಾತ್ಮಕ ಮನಸ್ಸು ಹೊಂದಿರುವವರೇ ಈ ಹುದ್ದೆಗೆ ಸೂಕ್ತ ಎಂದು ಮು. ನ್ಯಾ. ಲೋಧಾ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement