ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುಂದಿನ ವರ್ಷದಿಂದ ಏಕೈಕ ವೃತ್ತಿ ಶಿಕ್ಷಣ ಸಿಇಟಿ

Vishwanath S
Updated On : 19 Jul 2014, 12:58 pm

ವಿಧಾನಸಭೆ: ರಾಜ್ಯದಲ್ಲಿ ಮುಂದಿನ ವರ್ಷದಿಂದ ವೃತ್ತಿ ಶಿಕ್ಷಣ ಪ್ರವೇಶಕ್ಕೆ ಒಂದೇ ಪ್ರವೇಶ ಪರೀಕ್ಷೆ ಇರಲಿದ್ದು, ಸಿಇಟಿ ಮತ್ತು ಕಾಮೆಡ್-ಕೆ ಎಂದು ಪ್ರತ್ಯೇಕ ಪರೀಕ್ಷೆಗಳಿರುವುದಿಲ್ಲ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ. ಇಲಾಖೆ ಮೇಲಿನ ಚರ್ಚೆಗೆ ಶುಕ್ರವಾರ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಸಿಇಟಿ 2006 ಕಾಯಿದೆಗೆ ತಿದ್ದುಪಡಿ ತರಲು ಕಾನೂನು ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಮಾರ್ಗಸೂಚಿ ಪಾಲನೆ ಇಲ್ಲ: ಗೌರವ ಡಾಕ್ಟರೇಟ್ ನೀಡುವ ಬಗ್ಗೆ ಮಾರ್ಗಸೂಚಿಗಳಿವೆ, ಆದರೆ ಅವುಗಳನ್ನು ಪಾಲಿಸಲಾಗುತ್ತಿಲ್ಲ. ಇದರಲ್ಲಿ ಸರ್ಕಾರ ಪಾತ್ರ ಇಲ್ಲ. ಸಿಂಡಿಕೇಟ್‌ನಲ್ಲಿ ಅನುಮೋದಿಸಿದ್ದನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುತ್ತದೆ. ಉನ್ನತ ಶಿಕ್ಷಣ ಸಚಿವರು ಉಪಕುಲಾಧಿಪತಿಯಾಗಿದ್ದು, ರಾಜ್ಯಪಾಲರಿಗೆ ಗೌರವ ಡಾಕ್ಟರೇಟ್ ಪಟ್ಟಿ ಸಲ್ಲಿಸುವ ಮುನ್ನ ಸರ್ಕಾರ ಪರಿಶೀಲನೆ ಸಲ್ಲಿಸಲು ಸೂಚಿಸಲಾಗುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ದೂರಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಈ ಅಂಶ ನಮ್ಮ ಅರಿವಿಗೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಆಡಳಿತದಲ್ಲಿ ಶಿಸ್ತು ತರಲು ಕ್ರಮ ಕೈಗೊಳ್ಳಲಾಗುತ್ತದೆ. ಕೌನ್ಸೆಲಿಂಗ್‌ಗೆ ತಿದ್ದುಪಡಿ ತರಲಾಗುತ್ತದೆ ಎಂದರು. ಸರ್ಕಾರಿ ಕಾಲೇಜುಗಳನ್ನು ಮುಚ್ಚಿ ಯಾವುದೇ ಖಾಸಗಿಯವರಿಗೆ ಅನುಮತಿ ನೀಡುವುದಿಲ್ಲ. ಮೂಲ ವಿಜ್ಞಾನಕ್ಕೆ ಪ್ರೋತ್ಸಾಹ ಹಾಗೂ ಬೋಧಕರ ನೇಮಕದ ಬಗ್ಗೆ ಸರ್ಕಾರ ಆಲೋಚಿಸಿದೆ. ಈ ಬಗ್ಗೆ ಸಮಿತಿ ರಚಿಸಲಾಗಿದ್ದು, ವರದಿಯನ್ನೂ ನೀಡಿದ್ದಾರೆ. ಬಿಜಾಪುರದಲ್ಲಿರುವ ಮಹಿಳಾ ವಿವಿ ವ್ಯಾಪ್ತಿಯನ್ನು 13 ಜಿಲ್ಲೆಗಳಿಗೆ ಬದಲಾಗಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ನೀತಿ: ರಾಜ್ಯದಲ್ಲಿ ಹೊಸ 'ಪ್ರವಾಸೋದ್ಯಮ ನೀತಿ'ಯನ್ನು ಇನ್ನು 2-3 ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದು ಪ್ರವಾಸೋದ್ಯಮ ಖಾತೆಯನ್ನೂ ಹೊಂದಿರುವ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement