ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅತ್ಯಾಚಾರವಲ್ಲ, ಲೈಂಗಿಕ ಹಲ್ಲೆ ಅಷ್ಟೆ ಅಂದ್ರು ಖಮರುಲ್

ಜೇವರ್ಗಿಯ ಕಾಸರಭೋಸ್ಗಾದಲ್ಲಿ ಗುರುವಾರ ನಡೆದಿದ್ದ 7 ವರ್ಷದ ಬಾಲಕಿ ಮೇಲಿನ...

Vishwanath S
Updated On : 20 Jul 2014, 12:47 pm

ಗುಲ್ಬರ್ಗ: ಜೇವರ್ಗಿಯ ಕಾಸರಭೋಸ್ಗಾದಲ್ಲಿ ಗುರುವಾರ ನಡೆದಿದ್ದ 7 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಇಬ್ಬರು ಸಚಿವರ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
'ಇದು ಅತ್ಯಾಚಾರವಲ್ಲ, ಕೇವಲ ಲೈಂಗಿಕ ಹಲ್ಲೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿರುವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.   ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಅಲ್ಲಿ ರೇಪ್ ನಡೆದಿಲ್ಲ, ಅದೊಂದು ಸೆಕ್ಸುವಲ್ ಅಸಾಲ್ಟ್ ಕೇಸ್‌' ಎಂದು ನನಗೆ ಪೊಲೀಸ್ ಹಾಗೂ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯವರೇ ಆದ ಸೇಡಂ ಶಾಸಕ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಶುಕ್ರವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅನೇಕ ಸಂಗತಿಗಳನ್ನು ಪರಿಶೀಲಿಸಿದರೂ, ಅಲ್ಲೇ ದಾಖಲಾಗಿರುವ ಬಾಲಕಿಯ ಕುಟುಂಬವನ್ನು ಮಾತನಾಡಿಸಲಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement