ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಡೆಸ್ನಾನ ನಿಷೇಧಕ್ಕೆ ವಿಶೇಷ ಕಾನೂನು: ಸಿಎಂ

Vishwanath S
Updated On : 21 Jul 2014, 12:19 pm

ಜಮಖಂಡಿ: ರಾಜ್ಯ ಸರ್ಕಾರ ಶೀಘ್ರವೇ ಮಡೆಸ್ನಾನದಂಥ ಮೂಢನಂಬಿಕೆ ಪದ್ಧತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾನೂನು ರಚಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಜಮಖಂಡಿ ತಾಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ಮಾತನಾಡಿ, ನಾವು ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತೇವೆ. ಆದರೆ ಮಾಡುವ ಪೂಜೆ, ಪದ್ಧತಿಗಳು ವೈಚಾರಿಕತೆಯಿಂದ ಕೂಡಿರಬೇಕೇ ಹೊರತು ಮೌಢ್ಯತೆಯಿಂದ ಅಲ್ಲ. ಯಾವ ಶಾಶ್ತ್ರದಲ್ಲಿಯೂ ಉಲ್ಲೇಖವಾಗದ ಮಡೆಸ್ನಾನದಂಥ ಪದ್ಧತಿಗಳನ್ನು ನಿಷೇಧಿಸಬೇಕೆಂದರು. ಇಂದು ಜಾತಿ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಕಾಯಕ ಮಾಡಿ ಶ್ರೇಷ್ಠರಾಗಬೇಕೆ ಹೊರತು ಜಾತಿಯಿಂದ ಶ್ರೇಷ್ಠರಾಗುವುದು ಬೇಡ. ಮನುಕುಲ ಉದ್ಧಾರಕ್ಕೆ ಕನಕದಾಸರು ಶ್ರೇಷ್ಠ ಮಹಾನ್ ಪುರುಷರಾಗಿ ಹೋದರು. ಜಾತಿ, ಮತ-ಪಂಥಗಳಿಂದ ದೂರವಿದ್ದು, ಶ್ರೇಷ್ಠ ವ್ಯಕ್ತಿಗಳಾಗುವ ಕೆಲಸ ಮಾಡಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement