ಸಿಎಂ ಕೊಡ್ತಾರಾ ತರಕಾರಿ ಭಾಗ್ಯ?
ಬೆಂಗಳೂರು: ಅನ್ನಭಾಗ್ಯದ ಜತೆಗೆ 'ತರಕಾರಿ ಭಾಗ್ಯ'ವನ್ನೂ ಸರ್ಕಾರ ಕೊಡಬಹುದೇ?
ಇಂತಹ ನಿರೀಕ್ಷೆಯಲ್ಲಿದ್ದಾರೆ ನಗರಗಳ ನಾಗರಿಕರು. ಅಕ್ಕಿಯನ್ನು ಕೊಂಡು ತಿನ್ನಬಹುದು, ಆದರೆ ತರಕಾರಿ ಖರೀದಿಸುವುದು ಈಗ ಕಷ್ಟಕರವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 'ತರಕಾರಿ ಭಾಗ್ಯ' ನೀಡುವರೇ ಎಂಬ ಕಾತರ ಜನರಲ್ಲಿದೆ.
ಮುಂಗಾರು ಇನ್ನೇನು ಕೈಕೊಟ್ಟಿತು ಎನ್ನುವಾಗಲೇ ಗಗನಕ್ಕೇರಿದ್ದ ತರಕಾರಿ ಬೆಲೆ ಮಳೆಯಾದರೂ ಕಡಿಮೆಯಾಗಿಲ್ಲ. ಹಾಗಾಗಿ ಗ್ರಾಹಕರೂ ತರಕಾರಿ ಕೊಳ್ಳಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಸರ್ಕಾರ 1ಕ್ಕೆ 1ಕೆಜಿ ಅಕ್ಕಿ ಒದಗಿಸುತ್ತಿದ್ದರೆ ಇದೀಗ ತರಕಾರಿ ಒದಗಿಸುವ ಯೋಜನೆಯನ್ನೂ ಕೈಗೊಳ್ಳಬೇಕಾದ ಪ್ರಸಂಗ ಬಂದರೂ ಬರಬಹುದು.
ಬೀದಿಗಳಲ್ಲಿ ಬೆಳೆದು ಗ್ರಾಮೀಣ ಜನರಿಗೆ ಆಹಾರವಾಗಿದ್ದ ಟೊಮೆಟೊಗೆ ಈಗ ಭರ್ಜರಿ ಮರ್ಯಾದೆ. ರಾಜ್ಯದಲ್ಲಿ ಟೊಮೇಟೊ ಉತ್ಪಾದನೆ ಕುಸಿತ ಹಾಗೂ ಹೊರ ರಾಷ್ಟ್ರಗಳಿಗೆ ರಫ್ತಾಗುತ್ತಿರುವ ಕಾರಣ ರಾಜ್ಯದಲ್ಲಿ ಟೊಮೆಟೊ ದರ ಏರಿಕೆಯಾಗಿದೆ.
ಸಗಟು ದರದಲ್ಲೇ ಗುಣಮಟ್ಟದ ಟೊಮೆಟೋ ಕೆಜಿಗೆ 50 ಮೇಲ್ಪಟ್ಟಿದ್ದು ಗ್ರಾಹಕರಿಗೆ ಇದರಿಂದ ಭಾರಿ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ಮುಂಗಾರು ಮಳೆಯ ವಿಳಂಬದಿಂದಾಗಿ ಟೊಮೆಟೊ ಬಿತ್ತನೆ ಶೇ.50ರಷ್ಟು ಕುಸಿತ ಕಂಡಿದೆ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳಿಗೆ ಕರ್ನಾಟಕದಿಂದ ಹಣ್ಣು ರಫ್ತಾಗುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಹಣ್ಣಿನ ಕೊರತೆ ಉಂಟಾಗಿದೆ.
ಬೆಂಗಳೂರಿಗೆ ನಿತ್ಯ 150 ರಿಂದ 200 ಟನ್ ಟೊಮೆಟೊ ಬೇಕಾಗುತ್ತದೆ. ರಾಜ್ಯದಲ್ಲಿ 500 ಟನ್ಗಳನ್ನು ಬೆಳೆಯಲಾದರೂ ಹೊರರಾಜ್ಯಗಳಿಗೆ ರಫ್ತಾಗುವ ಕಾರಣ ಮಾರುಕಟ್ಟೆಗೆ ಹೊಡೆತ ಉಂಟಾಗಿದೆ. ಕೆ.ಆರ್. ಮಾರ್ಕೆಟ್ನಲ್ಲಿ ನಾಟಿ 45ರಿಂದ 50, ಹಾಪ್ಕಾಮ್ಸ್ನಲ್ಲಿ 56, ಚಿಲ್ಲರೆ ದರ(3ನೇ ದರ್ಜೆ) ರು. 45ರಿಂದ 50 ಇದೆ.
ಮುಂಗಾರು ಬರುವುದು ತಡವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಇನ್ನೇನು ಮುಂಗಾರು ಪ್ರಾರಂಭವಾಯಿತು ಎಲ್ಲದರ ದರ ಕಡಿಮೆಯಾಗಬುದು ಎಂಬ ನಿರೀಕ್ಷೆಗೆ ಮೋಡಗಳು ತಣ್ಣೀರೆರಚಿವೆ. ಆಟೋ ಚಾಲಕರಿಗೆ, ಬಸ್ ಡ್ರೈವರ್ಗಳಿಗೆ ಹಾಗೂ ಸುತ್ತಮುತ್ತಲ ಬೀದಿ ವ್ಯಾಪಾರಿಗಳಿಗೆ ಚಿಕ್ಕಪುಟ್ಟ ತಳ್ಳುವ ಗಾಡಿಗಳಲ್ಲಿ ಮಧ್ಯಾಹ್ನ ಊಟ ನೀಡುತ್ತಿದ್ದವರ ಗೋಳು ಹೇಳತೀರದು. ಎಲ್ಲ ತರಕಾರಿಗಳಿಗೂ ಬೆಲೆ ಏರಿದಾಗ ಮೂಲಂಗಿ, ಟೊಮೆಟೊ ಬಗ್ಗೆ ಭರವಸೆ ಇಟ್ಟಿದ್ದರು. ಆದರೆ ಅದು ಸುಳ್ಳಾಗಿದೆ.
ಎರಡು ಮೂರು ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದು ಹೀಗೆಯೇ ಮುಂದುವರಿದರೆ ತರಕಾರಿ ಇಲ್ಲದೆ ಅಡುಗೆ ಮಾಡುವ ಹೊಸ ವಿಧಾನಗಳಿಗೆ ಜನ ಮೊರೆ ಹೋಗಬೇಕಾದೀತು.
ರೈತರಿಗೆ ಅನುಕೂಲವಿಲ್ಲ
ತರಕಾರಿಗಳ ಈ ಪ್ರಮಾಣದ ಏರಿಕೆಯಿಂದ ಬೆಳೆದ ರೈತರಿಗೆ ಏನಾದರೂ ಅನುಕೂಲವಾಯಿತೆ? ಇಲ್ಲ. ಲಾಭ ಮಧ್ಯವರ್ತಿಗಳ ಜೇಬಿಗೆ ಹೋಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನರು ಹಾಗೂ ಬಡವರ ಹೊಟ್ಟೆಗೆ ಬರೆ ಎಳೆದಂತಾಗಿದೆ.
ಇಷ್ಟು ಮಾತ್ರವಲ್ಲದೇ ಜೀರಿಗೆ ಹಾಗೂ ಧನಿಯಾ ಬೆಲೆಯಲ್ಲಿ ಕೂಡ ಏರಿಕೆ ಕಂಡಿದ್ದು, ಸಗಟು ಧನಿಯಾ 100 ರಿಂದ 110, ಜೀರಿಗೆ 130 ರಿಂದ 140 ರಷ್ಟಾಗಿದೆ. ಕೊತ್ತಂಬರಿ ಸೊಪ್ಪಿನ ದರ ಏರಿಕೆ ಜತೆಯಲ್ಲೇ ಎಲ್ಲ ವಸ್ತುಗಳ ದರ ಏರಿಕೆಯಾಗಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ.
ಇಷ್ಟು ದಿನ ತರಕಾರಿಗಳ ಬೆಲೆ ಹೆಚ್ಚಾದರೂ ಕೊಂಡುಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಗ್ರಾಹಕರು ಮೊದಲು ಹೇಗೆ ಖರೀದಿಸುತ್ತಿದ್ದರೋ ಹಾಗೇ ತೆಗೆದುಕೊಂಡು ಹೋಗುತ್ತಿದ್ದಾರೆ. ಮುಂದೆ ಇನ್ನೂ ಬೆಲೆ ಏರಿಕೆಯಾದರೆ ಗ್ರಾಹಕರು ಹೀಗೆಯೇ ಯೋಚಿಸುವುದು ಕಷ್ಟವಿದೆ.
- ಷಣ್ಮುಗಂ,
ತರಕಾರಿ ಮಾರಾಟಗಾರ
ದಿನ ಬೆಳಗಾದರೆ ಏನು ಅಡುಗೆ ಮಾಡಬೇಕು ಎಂದು ಯೋಚಿಸುತ್ತಿದ್ದ ಹೆಂಗಸರುತರಕಾರಿ ಬೆಲೆ ಏರಿಕೆಯಿಂದ ಎಷ್ಟು ಅಡುಗೆ ಮಾಡಬೇಕು ಎಂದು ಯೋಚಿಸುವಂತಾಗಿದೆ.
- ಮಂಗಳಾ, ಗಿರಿನಗರ ನಿವಾಸಿ
ತರಕಾರಿ ಬೆಲೆ (ಕೆಜಿಗೆ)
ಕ್ಯಾರೆಟ್
80
ಹುರುಳಿಕಾಯಿ
70
ನುಗ್ಗೇಕಾಯಿ
80
ಕ್ಯಾಪ್ಸಿಕಮ್
100
ಟೊಮೇಟೊ
60 ಹಸಿ ಮೆಣಸು
66
ಈರುಳ್ಳಿ
60
ಬೀಟ್ರೂಟ್
46
ಮೂಲಂಗಿ
50
ಬೆಳ್ಳುಳ್ಳಿ
210
ಮಾರುಕಟ್ಟೆ ಧಾರಣೆ ಕಿಲೋ ದರ (ಗಳಲ್ಲಿ), ಭಾನುವಾರ
ಮಂಗಳೂರು
ಕೊತ್ತಂಬರಿ ಸೊಪ್ಪು 50-60
ಮೆಣಸಿನಕಾಯಿ 30
ಟೊಮೆಟೊ 48
ಬೀನ್ಸ್ 64
ಬೀಟ್ರೂಟ್ 30
ಬದನೆ 20
ತೊಂಡೆಕಾಯಿ 26
ಸೌತೆಕಾಯಿ 10-12
ಮುಳ್ಳುಸೌತೆ 14-16
ಕುಂಬಳಕಾಯಿ 16-20
ಚೀನೀಕಾಯಿ 12
ಸೊರೆಕಾಯಿ 36
ಸುವರ್ಣಗಡ್ಡೆ 36
ಕ್ಯಾರೆಟ್ 38
ಈರುಳ್ಳಿ 29
ಬಟಾಟಿ 26
ಬಾಳೆಕಾಯಿ 28
ಹೀರೆಕಾಯಿ 32
ಹುಬ್ಬಳ್ಳಿ
ಈರುಳ್ಳಿ 35
ಟೊಮೆಟೋ 40-50
ಆಲೂಗಡ್ಡೆ 30
ಬೀನ್ಸ್ 40
ಸವತೆಕಾಯಿ 40
ಕ್ಯಾಬೇಜ್ 40
ಹಸಿಮೆಣಸು 40
ಬದನೆಕಾಯಿ 30
ಬೆಂಡೆಕಾಯಿ 40
ಗಜ್ಜರಿ 40
ಬೆಳಗಾವಿ
ಟೊಮೆಟೊ 40
ಅವರೆಕಾಯಿ 60
ಬೀನ್ಸ್ 60
ಬದನೆಕಾಯಿ 20
ಬೆಂಡೆಕಾಯಿ 30-40
ಮೆಣಸಿನಕಾಯಿ 40
ಹಾಗಲಕಾಯಿ 30
ಬಟಾಟೆ 30
ಬೆಳ್ಳುಳ್ಳಿ 80
ಅಲ್ಲಾ 140
ಉಳ್ಳಾಗಡ್ಡಿ 30
ಸವತೆಕಾಯಿ 40
ಮೆಣಸಿನಕಾಯಿ 60
ಮೈಸೂರು
ಈರುಳ್ಳಿ 35
ಬೆಳ್ಳುಳ್ಳಿ 50
ಕ್ಯಾರೆಟ್ 70
ಬೀನ್ಸ್ 40
ಬೀಟ್ರೂಟ್ 40
ಟೊಮೇಟೊ 50
ಮೆಣಸಿನಕಾಯಿ 40
ದಪ್ಪ ಮೆಣಸಿನಕಾಯಿ 40
ಬದನೆಕಾಯಿ 40
ಹೀರೆಕಾಯಿ 30
ಆಲೂಗಡ್ಡೆ 33
ತೊಂಡೆಕಾಯಿ 20
ಗುಲ್ಬರ್ಗ
ಟೊಮೆಟೋ 60
ಆಲೂಗಡ್ಡೆ 30
ಬೀನ್ಸ್ 60
ಬೀಟ್ರೂಟ್ 60
ಬದನೆಕಾಯಿ 40
ಚವಳಿಕಾಯಿ 20
ತೊಂಡೆಕಾಯಿ 30
ಅವರೆಕಾಯಿ 50
ಹೀರೆಕಾಯಿ 60
ಸೌತೆಕಾಯಿ 60
ತಿಪ್ಪರೆಕಾಯಿ 40
ಹಾಗಲಕಾಯಿ 40
ಕ್ಯಾಪ್ಸಿಕಮ್ 50
ಎಲೆಕೋಸು 40
ಹೂಕೋಸು 50
ಬೆಂಡೆಕಾಯಿ 60
ನುಗ್ಗೆಕಾಯಿ 60
ಮೆಣಸಿನಕಾಯಿ 60
ಹಸಿ ಟೊಮೆಟೋ 40
ಶಿವಮೊಗ್ಗ
ಬೀನ್ಸ್ 65
ಕ್ಯಾರೆಟ್ 60
ತೊಂಡೆಕಾಯಿ 40
ಬೆಂಡೆಕಾಯಿ 20
ಈರುಳ್ಳಿ 25
ಹಸಿಮೆಣಸು 40
ಟೊಮ್ಯಾಟೋ 40
ಮೂಲಂಗಿ 20
ಬದನೆ 22
ನುಗ್ಗೆಕಾಯಿ 60
-ನಯನಾ ಬಿ.ಜೆ