ಅಧಿಕಾರಿಗಳಿಗಿದು ಆಸ್ತಿ ಘೋಷಣೆ ಕಾಲ
ನವದೆಹಲಿ: ಇನ್ನು ಮುಂದೆ ಐಎಎಸ್, ಐಪಿಎಸ್ ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ನೌಕರರು ಕಡ್ಡಾಯವಾಗಿ ಆಸ್ತಿ ಘೋಷಣೆ ಮಾಡಬೇಕು.
ನೂತನ ಲೋಕಪಾಲ ಕಾಯ್ದೆಯಂತೆ ಇದು ಕಡ್ಡಾಯ. ಈ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನೌಕರರು, ಅವರ ಪತ್ನಿ ಮತ್ತು ಮಕ್ಕಳ ಹೆಸರಲ್ಲಿರುವ ಆಸ್ತಿ ಪಾಸ್ತಿ ಬಗ್ಗೆಯೂ ಸವಿವರ ದಾಖಲೆ ನೀಡಬೇಕು.
ಏನೇನು ದಾಖರಿಸಬೇಕು?
ನೌಕರರು ಹೊಸ ತೆರಿಗೆ ಫಾರ್ಮ್ನಲ್ಲಿ ನೀಡಬೇಕಿರುವ ವಿವರ.
* ಕೈಯಲ್ಲಿರುವ ನಗದು
* ಬ್ಯಾಂಕ್ ಡಿಪಾಸಿಟ್
* ಹೂಡಿಕೆ ಬಾಂಡ್
* ಡಿಬೆಂಚರ್ಗಳು ಷೇರುಗಳು
* ಮ್ಯೂಚ್ಯುವೆಲ್ ಫಂಡ್ಸ್
* ಇನ್ಶುರೆನ್ಸ್ ಪಾಲಿಸಿಗಳು
* ಪ್ರಾವಿಡೆಂಟ್ ಫಂಡ್
* ವೈಯಕ್ತಿಕ ಸಾಲಗಳು
* ಯಾವುದೇ ವ್ಯಕ್ತಿಗೆ ಅಥವಾ ಸಂಸ್ಥೆಗೆ ಮುಂಗಡವಾಗಿ ನೀಡಿರುವ ಹಣದ ಬಗ್ಗೆ ವಿವರ.
* ನೌಕರರು, ಪತ್ನಿ, ಮಕ್ಕಳು ಹೊಂದಿರುವ ಮೋಟಾರು ವಾಹನಗಳು
* ವಿಮಾನಗಳು
* ಯಾಚೆ ಅಥವಾ ಶಿಪ್ಗಳು
* ಚಿನ್ನ ಮತ್ತು ಬೆಳ್ಳಿ ಆಭರಣ
ಜತೆಗೆ ಚರ ಮತ್ತು ಸ್ಥಿರಾಸ್ತಿ ಹಾಗೂ ಸಾಲದ ಸ್ಟೇಟ್ಮೆಂಟ್ಸ್ಗಳು ಮತ್ತು ನೌಕರಿ ಸಿಕ್ಕ ಮೊದಲ ವರ್ಷದ ಭಾದ್ಯತೆಗಳ ಬಗ್ಗೆ ಪ್ರತಿ ಆರ್ಥಿಕ ವರ್ಷದ ಮಾರ್ಚ್ 31ರೊಳಗೆ ಸಲ್ಲಿಸಬೇಕು. ಈಗಾಗಲೇ ತೆರಿಗೆ ರಿಟರ್ನ್ಸ್ ಸಲ್ಲಿಸಿರುವ ನೌಕರರು ಆ. 1ರೊಳಗೆ ಪರಿಷ್ಕೃತ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕು.
ನೌಕರರ ಸಂಖ್ಯೆ
50 ಲಕ್ಷ
ಯಾರಿಗೆ ಅನ್ವಯ?
ಐಎಎಸ್, ಐಎಫ್ಎಸ್, ಐಪಿಎಸ್ ಹಾಗೂ ಇನ್ನಿತರ ಕೇಂದ್ರ ಸರ್ಕಾರಿ ನೌಕರರು