ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಲ್ಲಿಲ್ಲ ಹೆಣ್ಣುಮಕ್ಕಳಿಗೆ ಸುರಕ್ಷೆ

Vishwanath S
Updated On : 23 Jul 2014, 1:20 am

ಮತ್ತೀಕೆರೆ ಜಯರಾಮ್
ರಾಮನಗರ:
ಹೆಣ್ಣು ಮಕ್ಕಳ ಸುರಕ್ಷತೆ ವಿಷಯದಲ್ಲಿ ಸರ್ಕಾರದ ಮಾತಿಗೂ, ಕೃತಿಗೂ ತಾಳೆಯೇ ಇಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರಕ್ಕೆರಡು ಬಾರಿ ಸಂಚರಿಸುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರ ಗೋಳು ಕೇಳೋರಿಲ್ಲ.
ಈ ಹೆದ್ದಾರಿಯಲ್ಲಿ ಇತ್ತ ರಾಮನಗರ, ಅತ್ತ ಮಂಡ್ಯ ಜಿಲ್ಲೆಗಳಿಗೆ ಕೊಂಡಿಯಾಗಿರುವ ಚನ್ನಪಟ್ಟಣ ಮತ್ತು ಮದ್ದೂರು ನಡುವೆ ಒಂದೇ ಒಂದು ಷಟಲ್ ಬಸ್ ಸಂಚಾರವಿಲ್ಲ. ಉಭಯ ಪಟ್ಟಣಗಳು 20 ಕಿ.ಮೀ. ಅಂತರದಲ್ಲಿದ್ದೂ ವ್ಯವಸ್ಥೆ ಮಾಡಲಾಗಿಲ್ಲ.
ತಪ್ಪಲ್ಲ: ಚನ್ನಪಟ್ಟಣ ಮತ್ತು ಮದ್ದೂರು ನಡುವೆ ಆಟೋಗಳದ್ದೇ ಅಬ್ಬರ. ಆಪೇ ಆಟೋಗಳಲ್ಲೂ ಚಾಲಕ ಸಹಿತ 4 ಮಂದಿ ಪ್ರಯಾಣಕ್ಕಷ್ಟೇ ಕಾನೂನಿನಲ್ಲಿ ಅವಕಾಶ. ಆದರೆ, 15 ರಿಂದ 20 ಮಂದಿಯನ್ನು ಸಾಗಿಸುತ್ತಾರೆ!
ಈ ಮಾರ್ಗದಲ್ಲಿ ನಿತ್ಯ 3 ಸಾವಿರದಷ್ಟು ವಿದ್ಯಾರ್ಥಿನಿಯರು ಸಂಚರಿಸುತ್ತಿದ್ದು, ಬಸ್ ಪಾಸಿದ್ದರೂ ಆಟೋಗೇ ಹೋಗಬೇಕಾದ ಅನಿವಾರ್ಯತೆ. ಈ ಹಿಂದೆ ಬಸ್ ವ್ಯವಸ್ಥೆ ಇದ್ದರೂ ಆಟೋದವರ ಲಂಚ ತಿಂದು ಸಾರಿಗೆ ಅಧಿಕಾರಿಗಳು ಸಂಚಾರ ಸ್ಥಗಿತಗೊಳಿಸಿದ್ದಾರೆ.
ಸುಮ್ಮನಾದರೇ ಕಿಮ್ಮನೆ: ಕಳೆದ ತಿಂಗಳು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮತ್ತೀಕೆರೆ-ಶೆಟ್ಟಿಹಳ್ಳಿಯ ಆದರ್ಶ ವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ್ದರು. ಆ ವೇಳೆ ಪೋಷಕರು, ಸಾರ್ವಜನಿಕರಿಂದ ದೂರು ಆಲಿಸಿ ಹೋದ ಅವರು ಏನೂ ಕ್ರಮ ಕೈಗೊಳ್ಳಲಿಲ್ಲ.
ರಾಮನಗರ ಮತ್ತು ಚನ್ನಪಟ್ಟಣ ನಡುವೆ ಸಮರ್ಪಕವಾಗಿ ಷಟಲ್ ಬಸ್ ಸಂಚಾರವಿದೆ. ಆದರೆ, ಚನ್ನಪಟ್ಟಣ ಮತ್ತು ಮದ್ದೂರು ನಡುವೆ ಒಂದೂ ಷಟಲ್ ಬಸ್ ಸಂಚಾರವಿಲ್ಲ. ಪುನಾರಂಭಿಸುವ ಬಗ್ಗೆ ಸರ್ವೆ ಕಾರ್ಯ ನಡೆದಿದೆ.
ಟಿ ಮಂಜು ನಾಯಕ್ ಘಟಕ ವ್ಯವಸ್ಥಾಪಕ, ಕೆಎಸ್‌ಆರ್‌ಟಿಸಿ, ರಾಮನಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement