ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭೂಗತ ಪಾತಕಿಗಳ ಹಾವಳಿ

Vishwanath S
Updated On : 23 Jul 2014, 12:52 pm

ಮಂಗಳೂರು: ಕರಾವಳಿ ನಗರಗಳು ಭೂಗತ ಪಾತಕಿಗಳ ಹಾಟ್‌ಸ್ಪಾಟ್ ಆಗುತ್ತಿದೆ. ಬಿಲ್ಡರ್‌ಗಳಿಗೆ ನೇರ ಸುಲಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅಷ್ಟೇ ಏಕೆ ಈ ಪಾತಕಿಗಳು ಸುದ್ದಿವಾಹಿನಿಗಳಿಗೆ ನೇರವಾಗಿ ಕರೆ ಮಾಡಿ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಬೆದರಿಕೆ ಹಾಕುತ್ತಾರೆ. ಆದರೆ ಇವರನ್ನು ಮಟ್ಟ ಹಾಕಬೇಕಾದ ಪೊಲೀಸರೇ 'ನಮ್ಮ ವ್ಯಾಪ್ತಿಯಲ್ಲಿ ಹಫ್ತಾ ವಸೂಲಿ ಮಾಡಬೇಡಿ' ಎಂದು ಇವರಿಗೆ ದಮ್ಮಯ್ಯ ಹಾಕಿದರೆ?
ಹೌದು. ಭೂಗತ ಲೋಕ ಈ ಭಾಗಗಳಲ್ಲಿ ವ್ಯಾಪ್ತಿ ಬೆಳೆಸಿಕೊಳ್ಳುತ್ತಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ವರ್ಷದಲ್ಲಿ 40ಕ್ಕೂ ಹೆಚ್ಚು  ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರದಲ್ಲಿಯೇ ಅಧಿಕೃತವಾಗಿ 21 ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡ ಗ್ರಾಮಾಂತರದಲ್ಲಿ 2, ಉಡುಪಿ ಜಿಲ್ಲೆಯಲ್ಲಿ 16, ಕಾರವಾರದಲ್ಲಿ 2 ಪ್ರಕರಣಗಳು ದಾಖಲಾಗಿವೆ. ಇನ್ನು ಪೊಲೀಸ್ ಠಾಣೆಗೆ ಬಾರದೆ ಇರುವ ಬೆದರಿಕೆ ಪ್ರಕರಣಗಳು, ಹಫ್ತಾ ನೀಡಿದ ಪ್ರಕರಣಗಳು ಅನೇಕ.
ನಂಬರ್ 1: ಅಂಕೋಲಾ ಆರ್.ಎನ್. ನಾಯ್ಕ್ ಕೊಲೆ ಬಳಿಕ ಬೆದರಿಕೆ ಪ್ರಕರಣ ಏರುಗತಿಯಲ್ಲಿದೆ. ಸುಲಿಗೆ ಬೆದರಿಕೆಯಲ್ಲಿ ಮೊದಲ ಸ್ಥಾನದಲ್ಲಿ ಬನ್ನಂಜೆ ರಾಜ ಇದ್ದು, ಇದೀಗ ಸ್ವತಂತ್ರವಾಗಿರುವ ಕಲಿ ಯೋಗೀಶ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಫ್ತಾ ವಸೂಲಿ ಮೂಲಕ ಎರಡನೇ ಸ್ಥಾನದಲ್ಲಿದ್ದಾನೆ. ಕರಾವಳಿಯಲ್ಲಿ ಹಫ್ತಾ ವಸೂಲಿಯಲ್ಲಿ ಮೊದಲ ಸ್ಥಾನದಲ್ಲಿದ್ದ ರವಿ ಪೂಜಾರಿಗೆ 'ಹುಡುಗರ' ಕೊರತೆಯಿಂದಾಗಿ ಮೂರನೇ ಸ್ಥಾನದಲ್ಲಿದ್ದಾನೆ ಎನ್ನುವುದು ಪೊಲೀಸರ
ಅಂದಾಜು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಿಲ್ಡರ್‌ಗಳ ಅಧಿಕೃತ ಸಂಸ್ಥೆ ಕ್ರೆಡಾಯ್ ವೆಬ್‌ಸೈಟಲ್ಲಿ ಎಲ್ಲ ಬಿಲ್ಡರ್‌ಗಳ ಹೆಸರು, ಕಚೇರಿ ವಿಳಾಸದ ವಿವರ ಇರುತ್ತದೆ.
ಕ್ಯಾಟ್ ಆ್ಯಂಡ್ ಮೌಸ್
ಇದು ಕ್ಯಾಟ್ ಆ್ಯಂಡ್ ಮೌಸ್ ಗೇಮ್, ನಾವು ಭೂಗತ ಪಾತಕಿಗಳ ಸದ್ದಡಗಿಸಲು ನಮ್ಮದೇ ಕ್ರಮ ಕೈಗೊಳ್ಳುತ್ತೇವೆ. ಎಸ್‌ಐಟಿ ಬೆಂಗಳೂರು ಮಟ್ಟದಲ್ಲಿ ನಡೆದಿರುವಂತಹುದು. ನಮ್ಮ ಕೆಲಸ ನಾವು ಮುಂದುವರಿಸುತ್ತೇವೆ ಎಂದು ಪಶ್ಚಿಮ ವಲಯ ಐಜಿಪಿ ಅಮ್ರಿತ್ ಪಾಲ್ ತಿಳಿಸಿದ್ದಾರೆ.


-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement