ಮೇಲೆದ್ದು ನಿಂತ ಕೋಸ್ಟ ಕಾರ್ಡಿಯಾ!
'ತೇಲಾಡುವ ಅರಮನೆ'ಯೆಂದೇ ಖ್ಯಾತವಾಗಿದ್ದ ಕೋಸ್ಟ ಕಾರ್ಡಿಯಾ ಹಡಗು ತನ್ನ ಕೊನೆಯ...
'ತೇಲಾಡುವ ಅರಮನೆ'ಯೆಂದೇ ಖ್ಯಾತವಾಗಿದ್ದ ಕೋಸ್ಟ ಕಾರ್ಡಿಯಾ ಹಡಗು ತನ್ನ ಕೊನೆಯ ಪಯಣವನ್ನು ಬುಧವಾರ ಆರಂಭಿಸಲಿದೆ. ಆದರೆ, ಈ ಪ್ರಯಾಣ ಪ್ರಯಾಣಿಕರ ಸೇವೆಗಾಗಿ ಅಲ್ಲ.. ಗುಜರಿ ಯಾರ್ಡ್‌ಗೆ! ಹೌದು. ಎರಡು ವರ್ಷಗಳಿಂದ ಸಾಗರದ ತಳದಲ್ಲೇ ಇದ್ದ ಹಡಗನ್ನು ಮೇಲೆತ್ತುವ ಪ್ರಯತ್ನಗಳು ಸಾಗುತ್ತಿದ್ದು, ಆನಂತರ ಹಡಗನ್ನು ಜಿನಿವಾದಲ್ಲಿನ ಗುಜರಿ ಯಾರ್ಡ್‌ಗೆ ಕೊಂಡೊಯ್ಯಲಾಗುವುದು.
ಕಾರ್ಯಾಚರಣೆ
ಪ್ರಸ್ತುತ ಹಡಗನ್ನು ಬಹುಪಾಲು ಮೇಲೆತ್ತಲಾಗಿದೆ. ಇನ್ನು, 2.5 ಮೀ.ನಷ್ಟು ಹಡಗು ಮೇಲೆ ಬರಬೇಕಿದೆಯಷ್ಟೇ. ಅಮೆರಿಕ, ಇಂಗ್ಲೆಂಡ್, ಹಾಲೆಂಡ್, ಸ್ಪೇನ್ ಹಾಗೂ ಇಟಲಿಯಿಂದ ಆಗಮಿಸಿರುವ ಸಿಬ್ಬಂದಿ ಹಡಗನ್ನು ಮೇಲೆತ್ತುವ ಕಾರ್ಯದಲ್ಲಿ ಕಳೆದೊಂದು ವಾರದಿಂದ ನಿರತರಾಗಿದ್ದರು. ಇಟಲಿಯ 'ನೇರಿ' ಎಂಬ ಸಂಸ್ಥೆ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ.
ಯಾವು ದೀ ಹಡಗು?
ಇಟಲಿಯ ಕಾರ್ನಿವಲ್ ಕಾರ್ಪೋರೇಷನ್ ಅಂಡ್ ಪಿಕ್ ಎಂಬ ಸಂಸ್ಥೆ 'ಕೋಸ್ಟ ಕಾರ್ಡಿಯಾ' ಹಡಗಿನ ಮಾಲೀಕತ್ವ ಹೊಂದಿತ್ತು. 2006ರಿಂದಲೂ ತನ್ನ ಸೇವೆಯನ್ನು ಈ ಹಡಗು ಆರಂಭಿಸಿತ್ತು. 2012ರ ಜ. 12ರ ರಾತ್ರಿ ಟೆಹರಾನ್ ಬಳಿಯ ದ್ವೀಪವೊದರ ಬಳಿ ಸಾಗುತ್ತಿದ್ದಾಗ ಸಾಗರದಡಿಯಿದ್ದ ಕಲ್ಲುಬಂಡೆಗೆ ಡಿಕ್ಕಿ ಹೊಡೆದು ದುರಂತಕ್ಕೀಡಾಯಿತು. ಹಡಗಿನಲ್ಲಿದ್ದ 3200 ಪ್ರಯಾಣಿಕರಲ್ಲಿ, 1, 023 ಮಂದಿ ಸುರಕ್ಷಿತವಾಗಿ ಪಾರಾದರಾದರೂ, 32 ಜನರಿಗೆ ಈ ಅದೃಷ್ಟವಿರಲಿಲ್ಲ. ಘಟನೆಯಲ್ಲಿ ಮೃತಪಟ್ಟ ಭಾರತೀಯ ಲೇಖಕ ರಸೆಲ್ ರೆಬೆಲ್ಲೊ ಅವರ ಮೃತದೇಹ ಇನ್ನೂ ಸಿಕ್ಕಿಲ್ಲ.
ಮುಂದೇನು?
ಹಡಗನ್ನು ಸಂಪೂರ್ಣವಾಗಿ ಮೇಲೆತ್ತಿದ ಮೇಲೆ ಅದನ್ನು ಜಿನಿವಾದಲ್ಲಿನ ಗುಜರಿ ಯಾರ್ಡ್‌ಗೆ ಸಾಗಿಸಲಾಗುವುದು. ಅಲ್ಲಿ, ಹಡಗಿನ ಬಿಡಿಭಾಗಗಳನ್ನು ಕಳಚಲಾಗುವುದು. ಈ ಡಿಸ್‌ಮ್ಯಾಂಟಲ್ ಕಾರ್ಯಾಚರಣೆ ಸುಮಾರು 2 ವರ್ಷಗಳವರೆಗೆ ನಡೆಯಲಿದೆ.
ಹಡಗಿನ ಭಾರ 114,500 ಟನ್
7.5 ಮೀಟರ್ ಅಡಿಯಷ್ಟು ಮುಳುಗಿತ್ತು