ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಂತರ್ಜಲ ವೃದ್ಧಿಗೆ ರಾಜಸ್ಥಾನ ಮಾದರಿ ಸರಣಿ ಚೆಕ್‌ಡ್ಯಾಮ್: ಸಚಿವ ತಂಗಡಗಿ

ಅಂತರ್ಜಲ ವೃದ್ಧಿಗೊಳಿಸಲು ರಾಜಸ್ಥಾನ ಮಾದರಿಯಲ್ಲಿ ಸರಣಿ ಚೆಕ್ ಡ್ಯಾಮ್ ನಿರ್ಮಿಸಲು ಸರ್ಕಾರ...

Mainashree
Updated On : 23 Jul 2014, 10:03 am

ವಿಧಾನಪರಿಷತ್ತು: ಅಂತರ್ಜಲ ವೃದ್ಧಿಗೊಳಿಸಲು ರಾಜಸ್ಥಾನ ಮಾದರಿಯಲ್ಲಿ ಸರಣಿ ಚೆಕ್ ಡ್ಯಾಮ್ ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಗಣೇಶ್ ಕಾರ್ಣಿಕ್ ಪ್ರಶ್ನೆಗೆ ಉತ್ತರಿಸಿದ ಅವರು, ಕುಸಿಯುತ್ತಿರುವ ಅಂತರ್ಜಲ ಹೆಚ್ಚಿಸುವುದು ಸರ್ಕಾರದ ಕೆಲಸವಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕಿದೆ ಎಂದರು. ಅಂತರ್ಜಲ ವೃದ್ಧಿಗೊಳಿಸಬೇಕೆನ್ನುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ರಾಜಸ್ಥಾನದ ಅನೇಕ ಭಾಗಗಳಲ್ಲಿ ಭೇಟಿ ನೀಡಿ ಅಲ್ಲಿನ ತಂತ್ರವಿಧಾನಗಳನ್ನು ಅಧ್ಯಯನ ಮಾಡಿದ್ದಾರೆ. ಅಲ್ಲಿರುವಂತೆ ಇಲ್ಲಿಯೂ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಿ ನೀರು ಇಂಗುವಂತೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಗೆ 5 ಕೋಟಿಯಂತೆ ಅನುದಾನ ಬೇಕಿದ್ದು, ಸದ್ಯಕ್ಕೆ ಕೋಲಾರ, ಚಿಕ್ಕಬಳ್ಳಾಪುರು, ಕೊಪ್ಪಳ, ಬಿಜಾಪುರ ಹಾಗೂ ಗದಗವನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಯಶಸ್ವಿಯಾಗುತ್ತಿದ್ದಂತೆ ಮತ್ತೆ 5 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಯೋಜನೆ ಮುಂದುವರಿಸಲಾಗುತ್ತದೆ ಎಂದು ತಂಗಡಗಿ ವಿವರಿಸಿದರು.
ಅಂತರ್ಜಲಕ್ಕೆ ಸಂಬಂಧಿಸಿದ ಸಂಸ್ಥೆ ಈತನಕ ಗಣಿ ಇಲಾಖೆಯಲ್ಲಿತ್ತು. ಈಗ ಸಣ್ಣ ನೀರಾವರಿ ಇಲಾಖೆಗೆ ಸೇರಿ ಅದಕ್ಕೊಂದು ಪ್ರಾಧಿಕಾರ ರಚಿಸಲಾಗಿದೆ. ಇತ್ತೀಚಿಗೆ ಬೋರ್‌ವೆಲ್ ಕೊರೆಯಲು ಅನುಮತಿ ಕೇಳಿ 8642 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 4458ಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಇನ್ನುಳಿದ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಈ ಮೂಲಕ ಕೂಡ ಅಂತರ್ಜಲ ರಕ್ಷಿಸಲಾಗುತ್ತಿದೆ ಎಂದು ತಂಗಡಗಿ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement