ಏಳು ಗಣಿಪರವಾನಗಿ ರದ್ದು
ಕ.ಪ್ರಭ ಪ್ರತಿನಿಧಿಯಿಂದ
ನವದೆಹಲಿ: ಸುಪ್ರೀಂಕೋರ್ಟ್ ಆದೇಶದಂತೆ ಬಳ್ಳಾರಿ ಜಿಲ್ಲೆಯಲ್ಲಿ ಜಂಬೂತನಹಳ್ಳಿ ದೇವಸ್ಥಾನ
ವ್ಯಾಪ್ತಿಯಲ್ಲಿ 7 ಮೈನಿಂಗ್ ಪರವಾನಗಿಯನ್ನು 2010 ಆಗಸ್ಟ್ ತಿಂಗಳಿಂದ ರದ್ದು ಮಾಡಲಾಗಿದೆ ಎಂದು ಗಣಿ ಮತ್ತು ಕಬ್ಬಿಣ ಖಾತೆ ರಾಜ್ಯ ಸಚಿವ ವಿಷ್ಣುದೇವ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಕುದುರೆಮುಖ, ಪಶ್ಚಿಮಘಟ್ಟ ಪ್ರದೇಶದ ಸೇರಿದಂತೆ ಕರ್ನಾಟಕದ 51 ಗಣಿಗಳಿಗೆ ನೀಡಿದ ಪರವಾನಗಿಯನ್ನು ರದ್ದು ಮಾಡಿದೆ.