ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಕಲಿ ಪ್ರಮಾಣಪತ್ರ: ಆರೋಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಬೆಳಗಾವಿ ತಾಲೂಕು ಪಂಚಾಯಿತಿಯಲ್ಲಿ ಅನಧಿಕೃತವಾಗಿ ಪ್ರಮಾಣಪತ್ರ ನೀಡುತ್ತಿದ್ದವರ ಮೇಲೆ ಕ್ರಿಮಿನಲ್...

Mainashree
Updated On : 23 Jul 2014, 10:05 am

ವಿಧಾನಪರಿಷತ್ತು: ಬೆಳಗಾವಿ ತಾಲೂಕು ಪಂಚಾಯಿತಿಯಲ್ಲಿ ಅನಧಿಕೃತವಾಗಿ ಪ್ರಮಾಣಪತ್ರ ನೀಡುತ್ತಿದ್ದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ ಅವರು, ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿದ್ದ ನೌಕರ ಸಂತೋಷ ಪಾಟೀಲ್ ನಕಲಿ ಪ್ರಮಾಣಪತ್ರ ನೀಡಿದ್ದು, ಬಾಹ್ಯ ಮೂಲಗಳಿಂದ ಕೃತ್ಯ ಎಸಗಿದ್ದಾನೆ. ಸರ್ಕಾರಿ ಕಚೇರಿಯಲ್ಲಿ ಅಕ್ರಮ ನಡೆದಿಲ್ಲ. ಸರ್ಕಾರದ ಹಾಲೋಗ್ರಾಂ ಹಾಗೂ ಪ್ರಮಾಣ ಪತ್ರಗಳಿಗೆ ನೀಡಿದ್ದ ಸಂಖ್ಯೆ ಬಳಸಿಕೊಂಡು ಅಕ್ರಮ ನಡೆಸಲಾಗಿದೆ. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದರು.
ತಾಲೂಕು ಕಚೇರಿಗಳಲ್ಲಿ ಪ್ರಮಾಣಪತ್ರಗಳಿಗೆ ನೀಡಲಾಗುವ ಸಂಖ್ಯೆಯನ್ನು ಬಳಸಿಕೊಂಡು ಬೇರೆ ಹೆಸರು ಹಾಗೂ ಭಾವಚಿತ್ರ ಹಾಕಲಾಗಿದೆ. ರಾಜ್ಯದಲ್ಲಿ ಎಲ್ಲೇ ನಕಲಿ ಪ್ರಮಾಣಪತ್ರ ನೀಡಿದ್ದರೂ ಪತ್ತೆ ಹಚ್ಚಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement