ಮಾತ್ರೆ ನುಂಗಿ ಮೂವರು ಮಕ್ಕಳು ಅಸ್ವಸ್ಥ
ಧಾರವಾಡ: ಅಳ್ನಾವರದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಮಕ್ಕಳಿಗೆ ನೀಡಿದ ವಿಟಮಿನ್ ಎ ಮಾತ್ರೆ, ಜಂತಿನ ಔಷಧ ಸೇವಿಸಿ ಮೂವರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅಲ್ಲಿನ ನೆಹರು ನಗರದ ಅಂಗವಾಡಿ ಕೇಂದ್ರದಲ್ಲಿ ಪುನೀತ ಯಲ್ಲಪ್ಪ ಬೆಟಗೇರಿ (ಎರಡೂವರೆ ವರ್ಷ), ಸುಹಾನ ನದೀಮ ಗೋಶನಟ್ಟಿ (3), ಸಬಾ ನದೀಮ ಗೋಶನಟ್ಟಿ (3), ಜ್ಯೋತಿ ಸುರೇಶ ಕಲ್ಯಾಣಕರ (4), ಬಸವ ಮಧುಕರ ತಲ್ಲೂರ (4), ಪ್ರಜ್ವಲ ವಿಠ್ಠಲ ಬೆಟಗೇರಿ (ಮೂರುವರೆ ವರ್ಷ), ದೀಪಕ ದೇವೇಂದ್ರ ಬೆಟಗೇರಿ (ಎರಡೂವರೆ ವರ್ಷ) ಸೇರಿ 10 ಮಕ್ಕಳು ಮಾತ್ರೆಗಳನ್ನು ಸೇವಿಸಿದ್ದಾರೆ. ಈ ಪೈಕಿ ಮೂವರಿಗೆ ವಾಂತಿ ಆಗಿದೆ.