ವಿಮಾನ ದುರಂತ: 51 ಸಾವು
ತೈಪೆ: ಉಕ್ರೇನ್ ಬಂಡುಕೋರರಿಗೆ ಮಲೇಷ್ಯಾದ ವಿಮಾನ ಬಲಿಯಾಗಿರುವಂತೆಯೇ ಬುಧವಾರ ಮತ್ತೊಂದು ವಿಮಾನ ದುರಂತ ನಡೆದಿದೆ. ತೈವಾನ್ನ ದ್ವೀಪವೊಂದರಲ್ಲಿ ಲ್ಯಾಂಡ್ ಆಗಲು ಯತ್ನಿಸುತ್ತಿದ್ದ ವಿಮಾನ ಅಪಘಾತಕ್ಕೆ ಈಡಾಗಿ 51 ಮಂದಿ ಅಸುನೀಗಿದ್ದಾರೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ತೈವಾನ್ನ ಪೆಂಗು ವಿಮಾನ ನಿಲ್ದಾಣದಲ್ಲಿ ಸಣ್ಣ ವಿಮಾನ ಲ್ಯಾಂಡ್ ಆಗಲು ಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಅದು ಅಪಘಾತಕ್ಕೆ ಈಡಾಯಿತು. ತೈವಾನ್ ಏರ್ಲೈನ್ಸ್ಗೆ ಸೇರಿದ ಈ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 54 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ತೈಪೆಯಿಂದ ಪೆಂಗು ದ್ವೀಪಕ್ಕೆ ಪ್ರಯಾಣಿಸುತ್ತಿತ್ತು.