ಶಿವಸೇನೆ ಎಡವಟ್ಟು
ನವದೆಹಲಿ: ರಂಜಾನ್ ಉಪವಾಸದಲ್ಲಿದ್ದ ಮುಸ್ಲಿಂ ಸಿಬ್ಬಂದಿಯೊಬ್ಬರಿಗೆ ಚಪಾತಿ ತಿನ್ನಿಸುವ ಮೂಲಕ ಶಿವಸೇನೆ ಸಂಸದ ರಾಜನ್ ವಿಚಾರೆ ಎಡವಟ್ಟು ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿರುವ ಮಹಾರಾಷ್ಟ್ರ ಸದನದಲ್ಲಿ ಊಟದ ವ್ಯವಸ್ಥೆ ಮಾಡಿದ್ದ ಐಆರ್ಸಿಟಿಸಿಯ ಮುಸ್ಲಿಂ ಸಿಬ್ಬಂದಿಗೆ ರಾಜನ್ ಅವರು ಸಿಟ್ಟಲ್ಲಿ ಚಪಾತಿ ತಿನ್ನಿಸಲು ಹೋಗಿದ್ದಾರೆ. ಇದು ಸಿಸಿಟಿವಿಯಲ್ಲಿ ದಾಖಲಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಬಳಿಕ ಸಂಸತ್ನಲ್ಲಿ ಗಲಾಟೆಯಾಗಿದ್ದು, ಎಲ್ಲ ವಲಯಗಳಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಶಿವಸೇನೆ ಸಂಸದರು ಸ್ಪಷ್ಟನೆ ನೀಡಿದ್ದಾರೆ.