ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಟೋ, ಬಸ್ಸು ಡಿಕ್ಕಿ: 7 ಸಾವು

Vishwanath S
Updated On : 26 Jul 2014, 1:15 am

ಹೊಸದುರ್ಗ: ಸಮೀಪದ ಮದುರೆ ದಿಬ್ಬದಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ಸರ್ಕಾರಿ ಬಸ್ಸು ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸೇರಿದಂತೆ 7 ಜನ ಮೃತಪಟ್ಟಿದ್ದಾರೆ. ಹೊಸದುರ್ಗದ ಆಶಾ (25), ಸ್ಪಂದನ (6), ಶ್ವೇತಾ (25), ಪವಿತ್ರ (1), ಕಾಂತರಾಜು (23), ಸಹನಾ (10), ಬಸವರಾಜು (26)  ಮೃತರು. ಅಮೂಲ್ಯಾ (5) ಚಿಂತಾಜನಕ ಸ್ಥಿತಿಯಲ್ಲಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಾಸಲಾಗಿದೆ.
ಘಟನೆ ವಿವರ: ಅಮಾವಾಸ್ಯೆ ಪ್ರಯುಕ್ತ ಗುತ್ತಿಕಟ್ಟೆ ಹಳ್ಳದ ಚೌಡಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಆಟೋದಲ್ಲಿ ಹೋಗುತ್ತಿದ್ದಾಗ ಬೆಂಗಳೂರಿನಿಂದ ಚನ್ನಗಿರಿ ಕಡೆ ಬರುತ್ತಿದ್ದ ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಹೊಸದುರ್ಗದ ಎಂಇಸ್ ಬಡಾವಣೆಯವರಾಗಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement