ಕೃಷ್ಣೆ ಪ್ರವಾಹ: 13 ಸೇತುವೆ ಜಲಾವೃತ
ಬೆಳಗಾವಿ: ಕೊಂಕಣ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಇಳಿಮುಖವಾಗಿದ್ದರೂ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಜಿಲ್ಲೆಯ 13 ಸೇತುವೆಗಳು ಇನ್ನೂ ಜಲಾವೃತಗೊಂಡಿವೆ.
ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ ಮತ್ತು ಕಾಳಮ್ಮವಾಡಿ ಜಲಾಶಯದಿಂದಲೂ ನೀರು ಬಿಟ್ಟಿದ್ದು ಸುಮಾರು 1.70 ಲಕ್ಷ ಕ್ಯುಸೆಕ್ಗೂ ಹೆಚ್ಚು ನೀರು ನದಿಯಲ್ಲಿ ಹರಿಯುತ್ತಿದೆ. ನದಿ ಪಕ್ಕದ ಹೊಲ ಗದ್ದೆ, ಗುಡಿಸಲುಗಳಿಗೂ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಚಿಕ್ಕೋಡಿ, ರಾಯಬಾಗ ತಾಲೂಕಿನಲ್ಲಿ 12 ಹಾಗೂ ಖಾನಾಪುರದಲ್ಲಿ ಒಂದು ಸೇತುವೆ ಜಲಾವೃತವಾಗಿವೆ. ಕರ್ನಾಟಕ- ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಕುಡಚಿ ಮುಖ್ಯ ಸೇತುವೆ ಮೇಲೆ 3 ಅಡಿಗಳಷ್ಟು ನೀರು ಹರಿಯುತ್ತಿದ್ದು. ಸಂಪರ್ಕ ಕಡಿತಗೊಂಡಿದೆ.
ಕೆಆರ್ಎಶ್ ಭರ್ತಿಗೆ 14 ಅಡಿ ಬಾಕಿ: ಕೆಆರ್ಎಸ್ಗೆ ಒಳ ಹರಿವು ಹೆಚ್ಚುತ್ತಿದ್ದು, ಭರ್ತಿಯಾಗಲು ಇನ್ನು 14 ಅಡಿ ಬಾಕಿ ಇದೆ.
ಇತೆರೆಡೆ ಮಳೆ: ರಾಜ್ಯದ ಅಲ್ಲಲ್ಲಿ ಮಳೆ ಮುಂದುವರಿದಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿಯೂ ಸಾಧಾರಣ ಮಳೆಯಾಗಿದೆ.
ವ್ಯಕ್ತಿ ಸಾವು: ನದಿ ದಡದಲ್ಲಿದ್ದ ಪಂಪ್ಸೆಟ್ ತೆಗೆಯಲು ಹೋದ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಚಿಕ್ಕೋಡಿ ತಾಲೂಕಿನ ಅಂಕಲಿ ಬಳಿಯ ನಿಲಜಿಯಲ್ಲಿ ನಡೆದಿದೆ. ಸತೀಶ ಕಮತೆ ಮೃತ ವ್ಯಕ್ತಿ. ಶವಕ್ಕಾಗಿ ಶೋಧ ನಡೆಯುತ್ತಿದ್ದರೂ ಸಂಜೆಯ ವರೆಗೂ ಶವ ಪತ್ತೆಯಾಗಿಲ್ಲ.