ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಂಧ್ರ, ಕರ್ನಾಟಕದ ಮೋಸ್ಟ್ ವಾಂಟೆಂಡ್ ನಕ್ಸಲ್ ಶೇಖರ್ಗೆ 2 ವರ್ಷ ಜೈಲು ಶಿಕ್ಷೆ

Vishwanath S
Updated On : 27 Jul 2014, 1:42 am

ಉಡುಪಿ: ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಡೆಸಿದ ಆರೋಪ ಎದುರಿಸುತ್ತಿರುವ ತಮಿಳುನಾಡಿನ ಮಾವೋವಾದಿ ಶೇಖರ್ ಯಾನೆ ರಂಜಿತ್ ಯಾನೆ ರವಿ ಯಾನೆ ಪ್ರೇಮ್ (25)ಗೆ ಉಡುಪಿ ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2010ರ ಜು. 26ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮದ ಬಸವನಪಾಲು ಎಂಬಲ್ಲಿ ಸ್ಫೋಟಕ ವಸ್ತುಗಳನ್ನು ತಯಾರಿಸಲು ಬಳಸುವ 10 ಡಿಟೋನೆಟರ್, 5 ಜಿಲೆಟಿನ್ ಕಡ್ಡಿ ಮತ್ತು ಮಾವೋವಾದಿ ಪುಸ್ತಕಗಳೊಂದಿಗೆ ಕಾಡಿನೊಳಗೆ ಪ್ರವೇಶಿಸುತ್ತಿದ್ದಾಗ ಈತನನ್ನು ನಕ್ಸಲೀಯರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಎಸ್ಐ ಆರ್. ಶಾಂತಪ್ಪ ನೇತೃತ್ವದ ಪೊಲೀಸ್ ಪಡೆ ಬಂಧಿಸಿತ್ತು.  ಈತ ಮೂಲತಃ ತಮಿಳುನಾಡಿನ ಚೆನ್ನೈ ಪಕ್ಕದ ತಿರುವಳ್ಳೂರು ಜಿಲ್ಲೆಯ ಕುಮಾರಮಂಗಲಂ ಗ್ರಾಮದ ಪಲ್ಲಿಪಟ್ಟು ಎಂಬಲ್ಲಿನ ನಿವಾಸಿ. ಮೋಸ್ಟ್ ವಾಂಟೆಂಡ್ ನಕ್ಸಲ್ ಆಗಿರುವ ಈತನ ತಲೆಗೆ ಅಲ್ಲಿನ ಪೊಲೀಸರು 2010ರಲ್ಲಿ 1 ಲಕ್ಷ ಬಹುಮಾನವನ್ನೂ ಘೋಷಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement