ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪರಿಸರದ ಮೇಲೆ ನಿರಂತರ ಅತ್ಯಾಚಾರ

Vishwanath S
Updated On : 27 Jul 2014, 1:42 am

ನೆಲಮಂಗಲ: ಮಾನವನ ದುರಾಸೆಯಿಂದ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ಅತ್ಯಾಚಾರದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಅತಿವೃಷ್ಟಿ ಇಲ್ಲ ಅನಾವೃಷ್ಟಿ ಉಂಟಾಗುತ್ತಿದೆ. ಅದನ್ನು ತಡೆಯಲು ಈಗಿನ ಯುವ ಪೀಳಿಗೆ ಮನಸ್ಸು ಮಾಡಬೇಕು ಎಂದು ಕನ್ನಡಪ್ರಭ ಸಹಾಯಕ ಸಂಪಾದಕ ರಾಧಾಕೃಷ್ಣ ಭಡ್ತಿ ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲೂಕಿನ ಮಹಿಮಾಪುರದಲ್ಲಿ ಕರ್ನಾಟಕದ ಭಾರತೀಯ ಕಿಸಾನ್ ಸಂಘ ಹಾಗೂ ಧರಣಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.  ಭೂಮಿಯನ್ನು ಉಳಿಸಲು ವಿಷ್ಣು ವರಾಹ ರೂಪ ಧರಿಸಿದಂತೆ, ಹಿರಣ್ಯಾಕ್ಷನ ರೂಪದಲ್ಲಿ ನಾಡಿನಲ್ಲಿರುವ ವಿವಿಧ ಕ್ಷೇತ್ರಗಳ ರಾಕ್ಷಸರನ್ನು ನಿಗ್ರಹಿಸಲು ಈಗಿನ ಮಕ್ಕಳು ಕೂಡ ವಿವಿಧ ಯೋಜನೆಗಳನ್ನು ರೂಪಿಸಿ ಸಕ್ರಿಯರಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆಕೊಟ್ಟರು.
ವಿಜಯನಗರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಒಂದು ಗಿಡವನ್ನು ನೆಟ್ಟು ನೆರೆದಿದ್ದವರಿಗೆ ಆಶೀರ್ವಚನ ನೀಡಿದರು. ನರಸೀಪುರದ ರಾಮದೇವರ ಬೆಟ್ಟದಲ್ಲಿ ನೂರಾರು ಮರ ಬೆಳಸಿರುವ ಪರಿಸರ ಪ್ರೇಮಿ ಹನುಮಂತರಾಯಪ್ಪ ಮತ್ತು ವರ್ಗವಾದ ಕಡೆಯೆಲ್ಲಾ ಔಷಧ ವನ ಬೆಳೆಸಿ ಅದರ ಉಪಯೋಗವನ್ನು ಮಕ್ಕಳಿಗೆ ತಿಳಿಸಿಕೊಡುವ ಶಿಕ್ಷಕ ದೊಡ್ಡೇರಿ ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement