ಸ್ಮಾಲ್ ಚಂದ್ರ... ಮಹಾನಾಮ
ಕ್ರಿಕೆಟ್ನಲ್ಲಿ ಗಾಯದ ಸಮಸ್ಯೆಯಿಂದ ತಮ್ಮ ವೃತ್ತಿಜೀವನವನ್ನೇ ಕೊನೆಗೊಳಿಸಿದವರು ಇದ್ದಾರೆ. ಏಟು ತಿಂದು ಪ್ರಾಣ ಕಳೆದುಕೊಂಡದ್ದೂ ಇದೆ(ರಮಣ್ ಲಂಬಾ). ದುಡ್ಡಿಗಾಗಿ ದೇಶವನ್ನು, ಆಟವನ್ನು ಮಾರಿಕೊಂಡವರೂ ಇದ್ದಾರೆ. ಇವರ ನಡುವೆ ಗಾಯದ ಸಮಸ್ಯೆ ನಡುವೆಯೂ ದೇಶಕ್ಕಾಗಿ ಆಡಿದವರಿದ್ದಾರೆ. ಕಪಿಲ್ದೇವ್ ಆಫ್ರಿಕಾ ವಿರುದ್ಧ ಒಂದೇ ಕೈಯ್ಯಲ್ಲಿ ಬ್ಯಾಟ್ಮಾಡಿ ಇನ್ನಿಂಗ್ಸ್ ಸೋಲು ತಪ್ಪಿಸಿದ್ದು, ಕುಂಬ್ಳೆ ಎದುರಾಳಿ ಬೌನ್ಸರ್ನಿಂದ ಭಾರೀ ಏಟು ತಿಂದು ಕೂಡ ಮುಖದ ತುಂಬಾ ಬ್ಯಾಂಡೇಜ್ ಹಾಕಿಕೊಂಡು ಬೌಲ್ ಮಾಡಲು ಬಂದು ಲಾರಾ ವಿಕೆಟ್ ಉರುಳಿಸಿದ್ದು ಇವೆಲ್ಲ ಮರೆಯಲಾಗದ ಕ್ಷಣಗಳು. ಈ ನಡುವೆ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಮತ್ತೆ ಕಣಕ್ಕಿಳಿದ ಆಸ್ಟ್ರೇಲಿಯಾದ ಓಡೊನೆಲ್, ನಮ್ಮವ ಯುವರಾಜ್ ಇನ್ನೊಂದು ರೀತಿಯ ಸಾಧಕರು.
ಆದರೆ ಈ ಮೂವರು ಕ್ರಿಕೆಟರ್ಗಳು ತಮ್ಮ ನ್ಯೂನತೆಗಳೊಂದಿಗೆಯೇ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಸಾಧಿಸಿದವರು.
ಗ್ಲಾಡ್ಸ್ಟೊನ್ ಸ್ಮಾಲ್: ಇಂಗ್ಲೆಂಡಿನ ಈ ಕ್ರಿಕೆಟಿಗನಿಗೆ ಕುತ್ತಿಗೆಯೇ ಇರಲಿಲ್ಲ. ಹೆಗಲ ಮೇಲೆ ತಲೆ ಕೂತು ಹೋಗಿತ್ತು . ಕ್ಲಿಪೆಲ್ ಫೀಲ್ ಸಿಂಡ್ರೋಮ್ ಎಂಬ ಖಾಯಿಲೆಯಿಂದ ಕುತ್ತಿಗೆಯೇ ಇಲ್ಲದಂತೆ ಹುಟ್ಟಿದ ಈ ಆಟಗಾರ, ಆ ವೈಕಲ್ಯದ ಹೊರತಾಗಿಯೂ ವೇಗದ ಬೌಲಿಂಗಲ್ಲಿ ಸಾಧನೆ ಮಾಡಿದಾತ.
ಬಿ ಎಸ್ ಚಂದ್ರಶೇಖರ್: ಪೋಲಿಯೋಗೆ ತುತ್ತಾಗಿ ಕೈನ ಸ್ವಾಧೀನ ಕಳೆದುಕೊಂಡರೂ ತನ್ನ ಗೂಗ್ಲಿ ಬೌಲಿಂಗ್ ಮೂಲಕ ಇಡೀ ವಿಶ್ವವನ್ನೇ ಚಕಿತಗೊಳಿಸಿದ್ದ ಚಂದ್ರ, ನಮ್ಮ ಕರ್ನಾಟಕದ ಸಾಧಕ. ಬೇಡಿ-ಪ್ರಸನ್ನ -ಚಂದ್ರ ತ್ರಿವಳಿ ಅಂದರೆ ಎದುರಾಳಿ ಬೆಚ್ಚಿ ಬೀಳುತ್ತಿದ್ದರು.
ರೋಶನ್ ಮಹಾನಾಮ: ಶ್ರೀಲಂಕಾದ ಈ ಆರಂಭಿಕ ಬ್ಯಾಟ್ಸ್ಮನ್ ತನಗೆ ಆಸ್ತಮಾ ಖಾಯಿಲೆ ಅಂದರೆ ತಂಡದಲ್ಲಿ ಜಾಗ ಸಿಗೋದಿಲ್ಲ ಎಂದು ಅದನ್ನು ಹೇಳಿಯೇ ಇರಲಿಲ್ಲವಂತೆ.
ಅದು ಬೆಳಕಿಗೆ ಬಂದದ್ದು ಕ್ಲಬ್ ಪಂದ್ಯವೊಂದರಲ್ಲಿ ದ್ವಿಶತಕ ಗಳಿಸಿ ಕುಸಿದಾಗಲೇ. ಆದರೆ ಆ ಅಸ್ತಮಾ ನಡುವೆಯೂ ದೇಶದ ಪರ ರನ್ ಮಳೆ ಹರಿಸಿದಾತ ಮಹಾನಾಮ. ಜಯಸೂರ್ಯ ಜೊತೆಗೆ ಭಾರತದ ವಿರುದ್ಧ ಬರೆದ ದಾಖಲೆ ಇನ್ನೂ ಅಭಾದಿತ.
ಮಂಗಳೂರ್ ಮಿರ್ರರ್
ಕನ್ನಡಿಯೇ ಹಾಗೆ. ಎಲ್ಲರನ್ನೂ ತನ್ನೆಡೆಗೆ ನೋಡುವಂತೆ ಮಾಡುತ್ತದೆ. ಕನ್ನಡಿಯ ಮ್ಂದೆ ಮನುಷ್ಯನೇ ಮಂಗ ಆಗ್ತಾನೆ. ಇನ್ನು ಮಂಗದ ಕೈಗೇ ಕನ್ನಡಿ ಸಿಕ್ರೆ ಕೇಳ್ಬೇಕಾ? ಶಿವಗಂಗೆ ಬೆಟ್ಟದ ಮೇಲೆ ಕಂಡ ಅಪರೂಪದ ದೃಶ್ಯ! ನಾಗರಾಜ್ ವೈದ್ಯ ಕ್ಯಾಮರಾ ಕಣ್ಣಿಗೆ ಬಿದ್ದದ್ದು.