ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವ್ಯಾಪಾರಕ್ಕೆ ಕುಳಿತ ಶಿಕ್ಷಣ ಸಂಸ್ಥೆ

Mainashree
Updated On : 27 Jul 2014, 11:00 am

-ಶ್ರೀರಂಗಪಟ್ಟಣ ಜ್ಯೋತಿ ನಿವಾಸ ಶಾಲೆ

ಬೆಂಗಳೂರು:
ಅಧಿಕ ಶುಲ್ಕ ವಸೂಲಿ ಮಾಡಿದ ಶಿಕ್ಷಣ ಸಂಸ್ಥೆಯ ವಿರುದ್ಧದ ಆರೋಪ ಸಾಬೀತಾಗಿದ್ದರೂ ಶಾಲೆಯ ಮಾನ್ಯತೆಯನ್ನು ಶಿಕ್ಷಣ ಇಲಾಖೆ ಇನ್ನೂ ರದ್ದು ಮಾಡಿಲ್ಲ.
ದೂರಿಲ್ಲದೇ ತನಿಖೆ ಅಸಾಧ್ಯಎಂದು ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹಾಗೂ ಅಧಿಕಾರಿಗಳ ಮುಂದೆ ಇಂಥ ದೃಷ್ಟಾಂತವಿದ್ದರೂ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಆರೋಪ ಸಾಬೀತಾಗಿದ್ದರೂ ಸುಮ್ಮನಿರುವ ಸಚಿವರ ಬಗ್ಗೆಯೂ ಪ್ರಶ್ನೆ ಮೂಡಿದೆ.
ಯಾವುದು ಪ್ರಕರಣ?: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಜ್ಯೋತಿ ನಿವಾಸ ಶಾಲೆಯಲ್ಲಿ ಕ್ಯಾಪಿಟೇಷನ್ ಶುಲ್ಕ ಪಡೆದದ್ದು ವಿಚಾರಣೆಯಿಂದ ಸಾಬೀತಾಗಿದೆ. ಈ ಸಂಬಂಧ ಸಂಸ್ಥೆ ವಿರುದ್ಧ ದೂರು ನೀಡಿರುವ ಪಾಲಕರು 'ಅಸ್ಪೃಶ್ಯ'ರಾಗಿದ್ದಾರೆ. ಜತೆಗೆ ಶಿಕ್ಷಣ ಹಕ್ಕು ಕಾಯಿದೆಯಲ್ಲಿ ಪ್ರವೇಶ ಪಡೆದ 22 ವಿದ್ಯಾರ್ಥಿಗಳಿಂದಲೂ ಶುಲ್ಕ ವಸೂಲಾಗಿದೆ.
ಅಲ್ಪಸಂಖ್ಯಾತರ ಸೋಗು: ರಾಜ್ಯ ಸರ್ಕಾರಿ ಹಿಂದಿನ ನಿಯಮದ ನ್ವಯ ಶಾಲೆಗೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಮಾನ್ಯತೆ ಸಾಧ್ಯವಿಲ್ಲ. ಆದಾಗ್ಯೂ ಅಲ್ಪಸಂಖ್ಯಾತ ಶಾಲೆಯೆಂದು ನಾಮಫಲಕ ಹಾಕಿಕೊಂಡು ಒಂದನೇ ತರಗತಿಗೆ ಆರ್‌ಟಿಇ ಮೂಲಕ ಪ್ರವೇಶ ಪಡೆದ 22 ವಿದ್ಯಾರ್ಥಿಗಳಿಗೆ 2ನೇ ತರಗತಿಗೆ ಈ ವರ್ಷ ಪ್ರವೇಶ ನೀಡಲಾಗಿಲ್ಲ. ಪ್ರವೇಶ ನೀಡಿದ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆಯಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಹಾಗೂ ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘನೆ ಸಹ. ಹೀಗಾಗಿ ತನಿಖೆ ನಡೆಸಲು ಪಾಲಕರು ಹಾಗೂ ರೈತ ಮುಖಂಡರು ಇಲಾಖೆಗೆ, ಮುಖ್ಯ ಕಾರ್ಯದರ್ಶಿಗೂ ದೂರು ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ತನಿಖೆ ನಡೆಸಲಾಗಿದೆ. ಸಂಸ್ಥೆ ವಿರುದ್ಧ ಒಟ್ಟು 9 ಆರೋಪ ಮಾಡಲಾಗಿತ್ತು. ಎಲ್ಲ ಆರೋಪಗಳು ನಿಜವೆಂದು ವಿಚಾರಣಾಧಿಕಾರಿ ವರದಿಯಲ್ಲಿ ಹೇಳಿದ್ದು, ಅದರ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ಪ್ರತಿ ವಿದ್ಯಾರ್ಥಿಯಿಂದ 9ಸಾವಿರ ಶುಲ್ಕ ವಸೂಲಿ ಮಾಡಲಾಗಿದೆ. ಜತೆಗೆ ಸ್ಮಾರ್ಟ್ ಕ್ಲಾಸ್, ಚಟುವಟಿಕೆ ಹಾಗೂ ಅಭಿವೃದ್ಧಿ ಶುಲ್ಕ ಪಡೆಯಲಾಗಿದೆ. ಜತೆಗೆ ಎಲ್ಲ ನಿಯಮ ಗಾಳಿಗೆ ತೂರಿದೆ. ಸಂಸ್ಥೆ ಶಿಕ್ಷಣ ವ್ಯಾಪಾರೀಕರಣಗೊಳಿಸಿದೆ. ಈ ಸಂಬಂಧ ದೂರಿದವರಿಗೆ ಬೆದರಿಕೆ ಹಾಕಿ, ಅವರನ್ನು ಶಾಲಾ ಆವರಣಕ್ಕೆ ಬರಗೊಟ್ಟಿಲ್ಲ ಎಂದು ವರದಿ ಸ್ಪಷ್ಟಪಡಿಸಲಾಗಿದೆ.

ವರದಿಗೆ ಧೂಳು!
ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆ ಶಿಕ್ಷಣಾಧಿಕಾರಿ ಕಚೇರಿಯಿಂದ ಜೂ.20ರಂದು ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಕೆಯಾಗಿದೆ. ಇಂಥ ಗುರುತರ ಆರೋಪ ಇಲಾಖೆಯ ಕಡತದಲ್ಲಿದ್ದರೂ, 'ತಮಗೆ ಯಾವುದೇ ದೂರು ಬಂದಿಲ್ಲ' ಎಂದು ಸಚಿವರ ಮೂಲಕ ಅಧಿಕಾರಿಗಳು ಸುಳ್ಳು ಹೇಳಿಸುತ್ತಿದ್ದಾರೆ.

-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement