ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಳಜಿ ಇಲ್ಲದವರ ಜತೆ ವಿಶ್ವಕರ್ಮ ಸಭೆ: ಆಕ್ಷೇಪ

ವಿಶ್ವಕರ್ಮ ಸಮಾಜದ ಬಗ್ಗೆ ಕಾಳಜಿಯಿಲ್ಲದ ವ್ಯಕ್ತಿಗಳ ಜತೆ ವಿಶ್ವಕರ್ಮ ಅಭಿವೃದ್ಧಿ ನಿಗಮದ...

Rashmi Kasaragodu
Updated On : 1 Aug 2014, 12:37 pm

ಬೆಂಗಳೂರು: ವಿಶ್ವಕರ್ಮ ಸಮಾಜದ ಬಗ್ಗೆ ಕಾಳಜಿಯಿಲ್ಲದ ವ್ಯಕ್ತಿಗಳ ಜತೆ ವಿಶ್ವಕರ್ಮ ಅಭಿವೃದ್ಧಿ ನಿಗಮದ ಸಭೆ ನಡೆಸಿರುವ ಸರ್ಕಾರದ ಕ್ರಮಕ್ಕೆ ಜೇನುಗೂಡು ವಿಶ್ವಕರ್ಮ ಬಳಗ ಆಕ್ಷೇಪಿಸಿದೆ.
ಜ್ಞಾನಪೀಠ ಸಾಹಿತಿ ಚಂದ್ರಶೇಖರ ಕಂಬಾರ ಹಾಗೂ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರಿಗೆ ವಿಶ್ವಕರ್ಮ ಸಮುದಾಯದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇವರು ವಿಶ್ವಕರ್ಮ ಸಮಾಜದಿಂದ ದೂರವಿದ್ದಾರೆ. ಸಮಾಜದ ಬಗ್ಗೆ ಯಾವುದೇ ಅಭಿಮಾನ ಹೊಂದಿಲ್ಲ. ಆದರೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಕಂಬಾರ ಹಾಗೂ ಆಚಾರ್ ಅವರನ್ನು ಆಹ್ವಾನಿಸಿ ಸಭೆ ನಡೆಸಿದ್ದಾರೆ. ಅಧಿಕಾರವಿದ್ದಾಗ ಈ ಸಮಾಜದ ಬಗ್ಗೆ ಕಿಂಚಿತ್ ಕಾಳಜಿ ಹೊಂದಿರದವರನ್ನು ಸಭೆಗೆ ಆಹ್ವಾನಿಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ಬಳಗದ ಕಾರ್ಯದರ್ಶಿ ಕೆ.ಎನ್. ಶ್ರೀಧರಾಚಾರ್ ಆರೋಪಿಸಿದ್ದಾರೆ.
ಸಮಾಜಕ್ಕಾಗಿ ಯಾವುದೇ ಕೆಲಸ ಮಾಡದೆ ವಿಶ್ವಕರ್ಮರ ಹೆಸರಲ್ಲಿ ಹುದ್ದೆ ಗಳಿಸಿಕೊಳ್ಳಲು ಇವರು ನಿಸ್ಸೀಮರಾಗಿದ್ದಾರೆ. ಕಂಬಾರರು ವಿಧಾನ ಪರಿಷತ್ ಸದಸ್ಯ ಅಥವಾ ಕುಲಪತಿಯಾಗಿದ್ದಾಗ ವಿಶ್ವಕರ್ಮರಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಇನ್ನು ಎಲ್ಲ ಪಕ್ಷಗಳನ್ನು ಸುತ್ತಾಡಿ ಈಗ ಪಕ್ಷೇತರರಾಗಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ವಿಶ್ವಕರ್ಮರ ಏಳಿಗೆಗೆ ಕಿಂಚಿತ್ ಸಹಾಯ ಮಾಡಿಲ್ಲ. ಇಂತಹ ವ್ಯಕ್ತಿಗಳನ್ನು ನಿಗಮ ರಚನೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ವಿಶ್ವಕರ್ಮರ ಅಭಿವೃದ್ಧಿಗೆ ಮಾರಕ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಹೆಚ್ಚಿನವರು ಇಂತಹ ಅವಕಾಶವಾದಿಗಳೇ ಇದ್ದರು. ವಿಶ್ವಕರ್ಮರ ಅಭಿವೃದ್ಧಿಗೆ ಶ್ರಮಿಸುತ್ತಿರುವವರನ್ನು ಕಡೆಗಣಿಸಲಾಗಿದೆ. ಕೆ.ಪಿ.ನಂಜುಂಡಿಯವರ ಸತತ ಹೋರಾಟದ ಫಲವಾಗಿ ನಿಗಮ ಅಸ್ತಿತ್ವಕ್ಕೆ ಬರುತ್ತಿದೆ. ಸಮಾಜದ ಪರವಾಗಿ ಹೋರಾಟ ಮಾಡುತ್ತಿರುವ ನಂಜುಂಡಿಯಂಥವರಿಗೆ ಪ್ರಾಶಸ್ತ್ಯ ನೀಡಬೇಕು. ಈ ನಿಟ್ಟಿನಲ್ಲಿ ಸಚಿವರು ಕಾರ್ಯನಿರ್ವಹಿಸಲಿ ಎಂದು ಬಳಗದ ಕಾರ್ಯದರ್ಶಿ ಶ್ರೀಧರಾಚಾರ್ ಆಗ್ರಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement