ಹೊಂಡಾಕ್ಕೆ ತೆರಿಗೆ ರಿಯಾಯ್ತಿ
ಸೀಮಾಂಧ್ರದತ್ತ ದೃಷ್ಟಿ ನೆಟ್ಟಿ ರುವ ಕೈಗಾರಿಕೆಗಳನ್ನು ರಾಜ್ಯಕ್ಕೆ ಸೆಳೆಯುವ...
ಬೆಂಗಳೂರು: ಸೀಮಾಂಧ್ರದತ್ತ ದೃಷ್ಟಿ ನೆಟ್ಟಿ ರುವಕೈಗಾರಿಕೆಗಳನ್ನು ರಾಜ್ಯಕ್ಕೆ ಸೆಳೆಯುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ. ಕೋರಂ ಕೊರತೆಯ ನಡುವೆಯೂ ಸಿದ್ದರಾಮಯ್ಯ, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ ಧಾರವಾಡದಿಂದ ಆಂಧ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದ ಹೊಂಡಾ ಘಟಕಕ್ಕೆ ಶೇ.70 ವ್ಯಾಟ್ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ಹಿಂದುಳಿದ ಪ್ರದೇಶಗಳಲ್ಲಿ ಘಟಕ ಆರಂಭಿಸಲು ಬರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವ್ಯಾಟ್, ಪ್ರವೇಶ ಶುಲ್ಕ, ಮುದ್ರಾಂಕ ಶುಲ್ಕ ವಿನಾಯಿತಿ ಜತೆಗೆಮೂಲ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ. ಮಂಗಳೂರಿನ ಜೆಬಿಎಫ್ ಪೆಟ್ರೋ ಕೆಮಿಕಲ್ ಸಂಸ್ಥೆ, ಧಾರವಾಡದ ಟಾಟಾ ಘಟಕ, ಗುಲ್ಬರ್ಗದಲ್ಲಿ ರಾಜಶ್ರೀ ಸಿಮೆಂಟ್ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿಗೆ ನಿರ್ಧರಿಸಲಾಗಿದೆ.