ಕಾಮೆಡ್-ಕೆಯಲ್ಲಿ ಹೊರ ರಾಜ್ಯಭಾರ
ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳ ಕಾಮೆಡ್-ಕೆ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಹೊರ ರಾಜ್ಯದ ...
ಪ್ರಥಮ ರ್ಯಾಂಕ್
- ವೈದ್ಯ-ದಂತವೈದ್ಯ
ಗಿರಿಜಾ ಅಗರವಾಲ್
ಬೆಂಗಳೂರು
178 ಅಂಕ
ಎಂಜಿನಿಯರಿಂಗ್
ಟಿ.ದಿನೇಶ್ ರಾಮ್ಕುಮಾರ್
ಬೆಂಗಳೂರು
164 ಅಂಕ
ಕನ್ನಡಪ್ರಭ ವಾರ್ತೆ, ಬೆಂಗಳೂರು ಜೂ.4
ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳ ಕಾಮೆಡ್-ಕೆ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಎಂಜಿನಿಯರಿಂಗ್ನಲ್ಲಿ ಶೇ.48 ಹಾಗೂ ವೈದ್ಯದಲ್ಲಿ ಶೇ.28ರಷ್ಟು ಕರ್ನಾಟಕದ ವಿದ್ಯಾರ್ಥಿಗಳು ಕಾಮೆಡ್-ಕೆ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ್ದಾರೆ. ವೈದ್ಯ-ದಂತವೈದ್ಯ ವಿಭಾಗದ ಮೊದಲ 10 ರ್ಯಾಂಕ್ಗಳಲ್ಲಿ ಹೊರರಾಜ್ಯದವರ ಪಾಲು 7 ಆಗಿದೆ. ಆದರೆ ಎಂಜಿನಿಯರಿಂಗ್ ವಿಭಾಗದಲ್ಲಿ ಮೂರನೇ ರ್ಯಾಂಕ್ ಹೊರತುಪಡಿಸಿ ಉಳಿದೆಲ್ಲ ಮೊದಲ 10 ರ್ಯಾಂಕ್ಗಳು ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ. ಮೊದಲ 100 ವೈದ್ಯ ರ್ಯಾಂಕ್ಗಳಲ್ಲಿ 21 ಹಾಗೂ ಎಂಜಿನಿಯರಿಂಗ್ನಲ್ಲಿ 76 ವಿದ್ಯಾರ್ಥಿಗಳು ರಾಜ್ಯದವರಾಗಿದ್ದಾರೆ.
ಕಳೆದ ಮೇ ಎರಡನೇ ವಾರದಲ್ಲಿ ನಡೆದ ಪ್ರವೇಶ ಪರೀಕ್ಷೆಗೆ 90,264 ವಿದ್ಯಾರ್ಥಿಗಳು ಹಾಜರಾಗಿದ್ದರು. ಎಂಜಿನಿಯರಿಂಗ್ನಲ್ಲಿ 43,179 ಹಾಗೂ ವೈದ್ಯ-ದಂತವೈದ್ಯದಲ್ಲಿ 23,794 ವಿದ್ಯಾರ್ಥಿಗಳು ರ್ಯಾಂಕ್ಗಳಿಸಿದ್ದಾರೆ. ಇದರಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪಾಲು ಕ್ರಮವಾಗಿ 20,446 ಹಾಗೂ 6506 ಆಗಿದೆ. ಪ್ರಸ್ತುತ ಸೀಟು ಹಂಚಿಕೆ ಪ್ರಕಾರ ಕಾಮೆಡ್-ಕೆ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ 837 ವೈದ್ಯ, 750 ದಂತವೈದ್ಯ ಹಾಗೂ ಸುಮಾರು 18 ಸಾವಿರ ಎಂಜಿನಿಯರಿಂಗ್ ಸೀಟುಗಳು ಲಭ್ಯವಿವೆ.
ಕಳೆದ ಶೈಕ್ಷಣಿಕ ಸಾಲಿನ ಕೌನ್ಸೆಲಿಂಗ್ನಲ್ಲಿ ವೈದ್ಯ ಸೀಟುಗಳ ಹಂಚಿಕೆ 2995 ಹಾಗೂ ದಂತವೈದ್ಯದಲ್ಲಿ 16,651ಕ್ಕೆ ನಿಂತಿತ್ತು.
ವೈದ್ಯ-ದಂತವೈದ್ಯ
ವಿಘ್ನೇಶ್ ನಾರಾಯಣ್, ಬೆಂಗಳೂರು
7ನೇ ರ್ಯಾಂಕ್. 172 ಅಂಕ(ವಿಐ)ಒಂದನೇ ರ್ಯಾಂಕ್. ರಾಜ್ಯದಲ್ಲಿಯೇ ವೈದ್ಯ ಶಿಕ್ಷಣ ಮಾಡುವ ಬಯಕೆ ಹೊಂದಿರುವ ವಿಘ್ನೇಶ್, ಸಿಇಟಿಯಲ್ಲಿ 4ನೇ ರ್ಯಾಂಕ್ಗಳಿಸಿದ್ದರು.
ರೋಹನ್ರಾಮ್ ಸೆಟ್ಲೂರ್, ಬೆಂಗಳೂರು
9ನೇ ರ್ಯಾಂಕ್. 171 ಅಂಕ(ಆರ್ಒ)ರಾಜ್ಯದಲ್ಲಿರುವ ಗುಣಮಟ್ಟದ ವೈದ್ಯ ಶಿಕ್ಷಣ ಸಂಸ್ಥೆಗಳಲ್ಲಿಯೇ ಎಂಬಿಬಿಎಸ್ ಮಾಡುತ್ತೇನೆ ಎಂದು ಹೇಳುವ ರೋಹನ್, ಸರ್ಕಾರಿ ಸಿಇಟಿಗೆ ಹಾಜರಾಗಿರಲಿಲ್ಲ.
ಎಂಜಿನಿಯರಿಂಗ್
ಪ್ರಜ್ವಲಾ ಟಿಎಂ, ಬೆಂಗಳೂರು
3ನೇ ರ್ಯಾಂಕ್. 163(ಪಿಆರ್)ರಾಜ್ಯದಲ್ಲಿಯೇ ಎಂಜಿನಿಯರಿಂಗ್ ಶಿಕ್ಷಣ ಮುಂದುವರೆಸುವುದಾಗಿ ಪ್ರಜ್ವಲಾ ಹೇಳಿದ್ದಾರೆ. ರಾಜ್ಯ ಸಿಇಟಿಯಲ್ಲಿ 35ನೇ ರ್ಯಾಂಕ್ ಗಳಿಸಿದ್ದರು.
ಸ್ಫೂರ್ತಿ ಭಟ್, ಬೆಂಗಳೂರು
4ನೇ ರ್ಯಾಂಕ್. 163(ಎಸ್ಪಿ)ಉತ್ತಮ ಎಂಜಿನಿಯರ್ ಆಗುವ ಬಯಕೆ ಹೊಂದಿರುವ ಸ್ಫೂರ್ತಿ, ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿಯೇ ಪ್ರವೇಶ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಅಂದಹಾಗೆ ಇವರು ಸರ್ಕಾರಿ ಸಿಇಟಿಯಲ್ಲಿ 225ನೇ ರ್ಯಾಂಕ್ ಪಡೆದಿದ್ದರು.