ಇಂದೇ ಕೇರಳಕ್ಕೆ ಮುಂಗಾರು
ರೈತರಿಗೆ ಇದು ಖುಷಿ ಸುದ್ದಿ... ನಿಗದಿಯಂತೆಯೇ ಮುಂಗಾರು ಮಳೆ ಶುಕ್ರವಾರವೇ ಕೇರಳ ಪ್ರವೇಶಿಸಲಿದೆ. ಹೀಗಂತ ಹವಾಮಾನ...
ನವದೆಹಲಿ: ರೈತರಿಗೆ ಇದು ಖುಷಿ ಸುದ್ದಿ... ನಿಗದಿಯಂತೆಯೇ ಮುಂಗಾರು ಮಳೆ ಶುಕ್ರವಾರವೇ ಕೇರಳ ಪ್ರವೇಶಿಸಲಿದೆ. ಹೀಗಂತ ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳಿದೆ. ಕೇರಳದಿಂದ ಅರೇಬಿಯನ್ ಸಮುದ್ರದ ದಕ್ಷಿಣ ಭಾಗ, ಮಾಲ್ಡೀವ್ಸ್-ಕೊಮೊರಿನ್ ಪ್ರದೇಶ, ತಮಿಳುನಾಡು, ಬಂಗಾಳ ಕೊಲ್ಲಿ ಕಡೆ ಮುಂಗಾರು ಸಾಗಲಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೂ ಮುಂಗಾರು ಮಾರುತ ಬರಲಿದೆ. ಶನಿವಾರದ ಒಳಗೆ ಅಂದರೆ, 24 ಗಂಟೆಗಳಲ್ಲಿ ಈಶಾನ್ಯ ರಾಜ್ಯಗಳಲ್ಲೂ ಮಳೆ ಕಾಣಿಸಿಕೊಳ್ಳಲಿದೆ.